Site icon PowerTV

ಖ್ಯಾತ ಬಹುಭಾಷಾ ನಟ ಅರ್ಜುನ್​ ಸರ್ಜಾಗೆ ಡಾಕ್ಟರೇಟ್​ ಗೌರವ

ಕನ್ನಡ ಸಿನಿರಂಗದ ಖ್ಯಾತ ನಟ ಅರ್ಜುನ್‌ ಸರ್ಜಾ ಅವರು ಬರೀ ನಟರಾಗಿ ಮಾತ್ರವಲ್ಲದೇ ನಿರ್ದೇಶಕನಾಗಿ, ನಿರ್ಮಾಪಕರಾಗಿ, ಸ್ಕ್ರೀನ್ ರೈಟರ್, ಡಿಸ್ಟಿಬ್ಯೂಟರ್, ವಿಲನ್ ಆಗಿ, ​ಪೋಷಕ ನಟರಾಗಿ ಗುರುತಿಸಿಕೊಂಡಿದ್ದಾರೆ.. ಇದೀಗ ಅವರ ಅಪಾರ ಸಾಧನೆಗೆ ಹಿರಿಮೆಯ ಗರಿಯೊಂದು ಸೇರ್ಪಡೆಯಾಗಿದೆ.

Arjun Sarja ಚಿತ್ರರಂಗದ ಆಕ್ಷನ್‌ ಕಿಂಗ್‌ ಅರ್ಜುನ್‌ ಸರ್ಜಾ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಹೀಗೆ ಹಲವಾರು ಭಾಷೆಗಳಲ್ಲಿ ಸಿನಿಮಾ ಮಾಡುವ ಮೂಲಕ ಬಣ್ಣದ ಲೋಕದಲ್ಲಿ ಛಾಪು ಮೂಡಿಸಿದ್ದಾರೆ.. ಚಿಕ್ಕ ವಯಸ್ಸಿನಲ್ಲೇ ನಟನೆಗೆ ಪದಾರ್ಪಣೆ ಮಾಡಿ ದೊಡ್ಡ ಹೆಸರು ಗಳಿಸಿ ಉನ್ನತ ಮಟ್ಟಕ್ಕೇರಿದ್ದಾರೆ.. ತಮ್ಮ  62ನೇ ವಯಸ್ಸಿನಲ್ಲೂ ಯುವ ನಟರಿಗೆ ಪೈಪೋಟಿ ನೀಡುವಂತಿದ್ದಾರೆ ಈ ನಟ.

ಇದೀಗ ಸಿನಿ ಕ್ಷೇತ್ರದಲ್ಲಿ ಅಪಾರವಾದ ಸಾಧನೆ, ಶ್ರಮವನ್ನು ಪರಿಗಣಿಸಿ ನಟ ಅರ್ಜುನ್‌ ಸರ್ಜಾ ಅವರಿಗೆ ಗೌರವ ಡಾಕ್ಟರೇಟ್‌ ನೀಡಲಾಗಿದೆ.. ಹೌದು ಆಕ್ಷನ್‌ ಕಿಂಗ್‌ಗೆ ಡಾ.ಎಂಜಿಆರ್ ಎಜುಕೇಶನಲ್ ಅಂಡ್ ರಿಸರ್ಚ್ ಇನ್​​ಸ್ಟಿಟ್ಯೂಟ್​ ಸರ್ವೀಸ್ ಕಡೆಯಿಂದ ಡಾಕ್ಟರೇಟ್‌ ಪ್ರಧಾನ ಮಾಡಲಾಗಿದೆ.

 

Exit mobile version