Site icon PowerTV

‘ಪುಷ್ಪ2- ದಿ ರೂಲ್​’ ಸಿನಿಮಾದ ಟ್ರೈಲರ್​ ಬಿಡುಗಡೆ

ಪಾಟ್ನಾ : ಭಾರತೀಯ ಸಿನಿ ರಸಿಕರ ಪಾಲಿನ ಅತ್ಯಂತ ಕುತೂಹಲದ ಸಿನಿಮಾ ಪುಷ್ಪ ದಿ ರೂಲ್​ ಸಿನಿಮಾದ ಟ್ರೈಲರ್​ ಬಿಡುಗಡೆಯಾಗಿದ್ದು. ಕೇವಲ 13 ನಿಮಿಷದಲ್ಲೆ ಒಂದು ಮಿಲಿಯನ್​ ವೀಕ್ಷಣೆ ಪಡೆಯುವ ಮೂಲಕ ದಾಖಲೆ ನಿರ್ಮಿಸಿದೆ.

ಇಂದು (ನ.17) ಬಿಹಾರದ ಪಾಟ್ನಾದಲ್ಲಿ ಚಿತ್ರತಂಡದಿಂದ ಟ್ರೈಲರ್​​ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು. ಈ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್​, ರಶ್ಮಿಕಾ ಮಂದಣ್ಣ ಸೇರಿದಂತೆ ಚಿತ್ರತಂಡದ ಎಲ್ಲಾ ತಂತ್ರಜ್ಙರು ಭಾಗವಹಿಸಿದ್ದಾರೆ.

ಬಿಡುಗಡೆಗು ಮುನ್ನವೆ ಚಿತ್ರದ ಬಗ್ಗೆ ಸಿನಿ ರಸಿಕರಲ್ಲಿ ಭಾರೀ ನಿರೀಕ್ಷೆ ಮೂಡಿ ಬಂದಿದ್ದು. ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ಹೊಸ ಮೈಲಿಗಲ್ಲನ್ನು ಸೃಷ್ಟಿ ಮಾಡುವ ನಿರೀಕ್ಷೆಯನ್ನು ಚಿತ್ರತಂಡ ಮೂಡಿಸಿದೆ.

Exit mobile version