Site icon PowerTV

ಕಂದಾಯ ಅಧಿಕಾರಿಗಳಿಗೆ ಬಹಿರಂಗ ಬೆದರಿಕೆ ಹಾಕಿದ ಮಾಜಿ ಸಂಸದ ಮುನಿಸ್ವಾಮಿ

ಚಿಕ್ಕಬಳ್ಳಾಪುರ : ವಿವಾದಿತ ವಕ್ಪ್ ಜಮೀನಿನ ಬಳಿ ಮಾಜಿ ಸಂಸದ ಮುನಿಸ್ವಾಮಿ ಕಂದಾಯ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದು. ನಮ್ಮ ಸರ್ಕಾರ ಬಂದರೆ ನಿಮ್ಮನ್ನು ಶಾಶ್ವತವಾಗಿ ಮನೆಯಲ್ಲಿರುವಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕು ತಿಮ್ಮಸಂದ್ರ ಗ್ರಾಮದ ಬಳಿ ಘಟನೆ ನಡೆದಿದ್ದು  ಮಾಜಿ ಸಂಸದ ಮುನಿಸ್ವಾಮಿ ಕಂದಾಯ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ. ‘ನಮ್ಮ ಸರ್ಕಾರವೂ ಬರುತ್ತದೆ ಆಗ ಹುಡುಕಿ ಹುಡುಕಿ.. ಕೆಲಸ ಕೊಡ್ತೀವಿ, ನಮ್ಮ ಸರ್ಕಾರ ಬಂದ್ರೆ ನೀವು ಪರ್ಮನೆಂಟಾಗಿ ಮನೆಯಲ್ಲಿ ಇರಬೇಕು ಅಂತ ಧಮ್ಕಿ ಹಾಕಿದ್ದಾರೆ.  ಏಕವಚನದಲ್ಲೇ ಸಂಬೋಧಿಸಿ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಸಂಸದ ಮುನಿಸ್ವಾಮಿ
ಪ್ರಕರಣ ಕೋರ್ಟಿನಲ್ಲಿ ಇರಬೇಕಾದರೆ ವಿವಾದಿತ ಜಮೀನಿಗೆ ಕಾಂಪೌಂಡ್ ಹೆಂಗೆ ಹಾಕಿದ್ರಿ  ಎಂದು ಮೊದಲು ಕಾಂಪೌಂಡ್ ತೆಗೆಸುವಂತೆ ಸೂಚನೆ ನೀಡಿದರು. ಮುನಿಸ್ವಾಮಿ ಆಗಮನದಿಂದ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು

Exit mobile version