Site icon PowerTV

ಡಾಲಿ ಧನಂಜಯ್​ ಮನೆಯಲ್ಲಿ ನಿಶ್ಚಿತಾರ್ಥದ ಸಂಭ್ರಮ

ಬೆಂಗಳೂರು : ನಟ ಡಾಲಿ ಧನಂಜಯ್​ ಮತ್ತು ಡಾಕ್ಟರ್​​ ಧನ್ಯತಾ ಅವರ ನಿಶ್ಚಿತಾರ್ಥ ಇಂದು ನಡೆದಿದ್ದು. ಅರಸೀಕೆರೆಯ ತಮ್ಮ ಮನೆಯಲ್ಲಿ ಮದುವೆ ಶಾಸ್ತ್ರ ನಡೆದಿದೆ. ಫೆಬ್ರವರಿಯಲ್ಲಿ ಧನಂಜಯ್​​ ವಿವಾಹ ನಡೆಯಲಿದೆ ಎಂದು ಮಾಹಿತಿ ದೊರೆತಿದೆ.

ನಟ ಡಾಲಿ ಮನೆಯಲ್ಲಿ ಮದುವೆ ಶಾಸ್ತ್ರ ಪ್ರಾರಂಭವಾಗಿದ್ದು ನಿಶ್ಚಿತಾರ್ಥ ಸಂಭ್ರಮದಲ್ಲಿ ನಟ ಡಾಲಿ ಧನಂಜಯ ಇದ್ದಾರೆ ಧನಂಜಯ ಅವರ ಮನೆ ಅರಸೀಕೆರೆಯ ಕಾಳೇನಹಳ್ಳಿಯಲ್ಲಿ ನಿಶ್ಚಿತಾರ್ಥ ನಡೆಯುತ್ತಿದ್ದು ಅತ್ಯಂತ ಸರಳವಾಗಿ ನಿಶ್ಚಿತಾರ್ಥ ನಡೆದಿದೆ.ಇದೇ 2025, ಫೆಬ್ರವರಿ 16ಕ್ಕೆ  ಮೈಸೂರಿನ ಎಕ್ಸಿಬಿಷನ್ ಗ್ರೌಂಡ್ ನಲ್ಲಿ ಡಾಲಿ ಹಾಗೂ ಧನ್ಯತಾ ಮದುವೆ ನಡೆಯಲಿದೆ ಎಂದು ಮಾಹಿತಿ ದೊರೆತಿದೆ.

ಧನಂಜಯ್​ ನಿಶ್ಚಿತಾರ್ಥದ ಫೋಟೋಗಳು

2

Exit mobile version