Site icon PowerTV

ಮೃತ ವ್ಯಕ್ತಿಯ ಕಣ್ಣು ನಾಪತ್ತೆ : ಇಲಿಗಳೇ ಕಾರಣ ಎಂದ ಆಸ್ಪತ್ರೆ ಸಿಬ್ಬಂದಿ

ಬಿಹಾರ್​ : ಗುಂಡಿನ ದಾಳಿಯಲ್ಲಿ ಗಾಯಗೊಂಡು ಪಟ್ನಾದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಆದರೆ, ಕೆಲವೇ ಗಂಟೆಗಳಲ್ಲಿ ಆತನ ಒಂದು ಕಣ್ಣು ಇಲ್ಲವಾಗಿದೆ. ವ್ಯಕ್ತಿಯ ಸಾವಿನ ಸುದ್ದಿ ತಿಳಿದು ಕೇಳಿ ದುಃಖದಲ್ಲಿ ಮುಳುಗಿದ್ದ ಕುಟುಂಬ ಇದೀಗ, ಆಘಾತಕ್ಕೊಳಗಾಗಿದೆ.

ಅಕ್ರಮದಲ್ಲಿ ತೊಡಗಿರುವ ಆಸ್ಪತ್ರೆಯ ವೈದ್ಯರೇ ಕಣ್ಣನ್ನು ತೆಗೆದಿದ್ದಾರೆ ಎಂದು ಮೃತನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಆಸ್ಪತ್ರೆಯ ಆಡಳಿತ ಮಂಡಳಿ ಕಣ್ಣು ಕಾಣೆಯಾಗಿರುವುದಕ್ಕೆ ಇಲಿಗಳು ಕಾರಣ ಎಂದು ಹೇಳಿಕೆ ನೀಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಗುಂಡು ತಗುಲಿ ಗಾಯಗೊಂಡಿದ್ದ ಫಾಂತುಸ್ ಕುಮಾರ್ ಎಂಬವರು ನಳಂದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಗುರುವಾರ ದಾಖಲಾಗಿದ್ದರು. ಈ ಆಸ್ಪತ್ರೆಯು ಪಟ್ನಾದಲ್ಲೇ ಎರಡನೇ ಅತಿದೊಡ್ಡದಾಗಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಮಾರ್ ಮೃತಪಟ್ಟಿರುವುದಾಗಿ ಮರುದಿನ ಘೋಷಿಸಲಾಗಿತ್ತು. ಶನಿವಾರದವರೆಗೂ ಆಸ್ಪತ್ರೆಯಲ್ಲೇ ಇದ್ದ ಕುಟುಂಬದವರು, ಕಣ್ಣು ಕಾಣೆಯಾಗಿರುವದು ಗೊತ್ತಾಗುವುದಕ್ಕೆ ಮುನ್ನ ಕೆಲ ಹೊತ್ತು ಮಾತ್ರವೇ ಆಚೀಚೆ ಹೋಗಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಿದೆ.

Exit mobile version