Site icon PowerTV

ಪರೀಕ್ಷೆಯಲ್ಲಿ ಫೇಲ್​​ ಆಗಿದ್ದಕ್ಕೆ ದೇವರ ವಿಗ್ರಹ ಹೊಡೆದ ಬಾಲಕ

ಬೆಂಗಳೂರು : ಜೀವನ್​​ ಭೀಮಾನಗರದಲ್ಲಿ ದೇವರ ವಿಗ್ರಹ ಹೊಡೆದ ಪ್ರಕರಣಕ್ಕೆ ಟ್ವಿಸ್ಟ್​​ ದೊರೆತಿದ್ದು. ಬಾಲಕನೋರ್ವ ಪರೀಕ್ಷೆಯಲ್ಲಿ ನಿರಂತರವಾಗಿ ಅನುತೀರ್ಣಗೊಂಡಿದ್ದಕ್ಕೆ ದೇವರ ವಿಗ್ರಹಕ್ಕೆ ಕಲ್ಲಿನಿಂದ ಹೊಡೆದು ಹಾನಿ ಮಾಡಿದ್ದಾನೆ ಎಂದು ಮಾಹಿತಿ ದೊರೆತಿದೆ.

ನವೆಂಬರ್​ 11ರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬಾಲಕನೊಬ್ಬ ಜೀವನ್​ಬೀಮಾ ನಗರದಲ್ಲಿರುವ ಭುವನೇಶ್ವರಿ ದೇವಿಯ ದೇವಾಲಯಕ್ಕೆ ನುಗ್ಗಿ ಅಲ್ಲಿನ ವಿಗ್ರಹಕ್ಕೆ ಕಲ್ಲಿನಿಂದ ಹೊಡೆದು ಹಾನಿ ಮಾಡಿದ್ದನು. ಇದರ ಕುರಿತು ಹಿಂದೂಪರ ಸಂಘಟನೆಗಳು ಪೋಲಿಸ್​ ಠಾಣೆಗೆ ದೂರು ಕೊಟ್ಟು ಅಪರಾಧಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದರು.

ಆದರೆ ಈ ಪ್ರಕರಣಕ್ಕೆ ಇದೀಗ ಹೊಸ ಟ್ವಸ್ಟ್​​ ದೊರೆಯುತ್ತಿದ್ದು ಬಾಲಕನೊಬ್ಬ SSLC ಫೇಲ್ ಆಗಿದ್ದಕ್ಕೆ ಸಿಟ್ಟಿಗೆದ್ದು ವಿಗ್ರಹ ವಿರೂಪಗೊಳಿಸಿದ್ದಾನೆ ಎನ್ನಲಾಗಿದೆ.  ಎಸ್ ಎಸ್ ಎಲ್ ಸಿಯಲ್ಲಿ ಮೂರು ಬಾರಿ ಫೇಲ್ ಆಗಿದ್ದ ಬಾಲಕ ನಿರಂತರವಾಗಿ ಫೇಲ್​ ಹಾಗಿದ್ದಕ್ಕೆ ಸಿಟ್ಟಿಗೆದ್ದು ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ

ಅಪಾರ ದೈವ ಭಕ್ತನಾಗಿದ್ದ ಅಪ್ರಾಪ್ತ ಬಾಲಕ ಭುವನೇಶ್ವರಿ ದೇವಿಯನ್ನ ನಂಬಿದ್ದನು ಆದರೆ ಎಸ್​ಎಸ್​ಎಲ್​​ಸಿ ಯಲ್ಲಿ ಫೇಲ್ ಆಗಿದ್ದಕ್ಕೆ ದೇವರ ಮೇಲೆ ಸಿಟ್ಟಿಗೆದ್ದಿದ್ದ ಬಾಲಕ ಕೋಪಗೊಂಡು ವಿಗ್ರಹ ವಿರೂಪ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಹುಡುಗನಿಗೆ ಮಾನಸಿಕವಾಗಿ ತೊಂದರೆಇದೆ ಎಂಬ ವಿಷಯವು ಚರ್ಚೆಯಾಗುತ್ತಿದ್ದು
ಮಧ್ಯರಾತ್ರಿ ಓಡಾಡೋದು, ಒಬ್ಬೊಬ್ಬನೇ ಮಾತಾಡೋದು ಮಾಡುತ್ತಿದ್ದ ಎಂದು ಸಹ ತಿಳಿಸಿದ್ದಾರೆ. ಸದ್ಯ ಬಾಲಕನನ್ನು ವಶಕ್ಕೆ ಪಡೆದಿರೊ ಪೋಲಿಸರು ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ದೊರೆತಿದೆ.

Exit mobile version