Site icon PowerTV

ಇಸ್ರೇಲ್ ಪ್ರಧಾನಿ ನೆತನ್ಯಾಹು ಹ*ತ್ಯೆಗೆ ಯತ್ನ

ಇಸ್ರೇಲ್​ :  ಕೈಸ್ರಾದಲ್ಲಿರುವ ಬೆಂಜಮಿನ್​ ನೆತನ್ಯಾಹು ಅವರ ನಿವಾಸದ ಬಳಿ ಎರಡು ರಾಕೆಟ್‌ಗಳು ಬಿದ್ದಿದ್ದು, ದಾಳಿ ಸಮಯದಲ್ಲಿ ನೆತನ್ಯಾಹು ಅಥವಾ ಅವರ ಕುಟುಂಬವು ನಿವಾಸದಲ್ಲಿ ಇರಲಿಲ್ಲ. ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಕಾಳಗ ಮತ್ತಷ್ಟು ತಾರಕ್ಕೇರಿದ್ದು ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರ ಮನೆ ಮೇಲೆ ಹಿಜ್ಬುಲ್ಲಾ ಸಂಘಟನೆ  ಮತ್ತೊಮ್ಮೆ ದಾಳಿ ನಡೆಸಿದೆ. ಕೈಸ್ರಾದಲ್ಲಿರುವ ನೆತನ್ಯಾಹು ಅವರ ನಿವಾಸದ ಬಳಿ ಎರಡು ರಾಕೆಟ್‌ಗಳು ಬಿದ್ದಿದ್ದು, ದಾಳಿ ಸಮಯದಲ್ಲಿ ನೆತನ್ಯಾಹು ಅಥವಾ ಅವರ ಕುಟುಂಬವು ನಿವಾಸದಲ್ಲಿ ಇರಲಿಲ್ಲ. ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್‌, ಹಿಜ್ಬುಲ್ಲಾ  ಎಲ್ಲ ಮಿತಿಗಳನ್ನು ಮೀರಿದೆ  ಇದನ್ನು ಸಹಿಸಲಾಗದು. ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದ್ದಾರೆ.

Exit mobile version