Site icon PowerTV

ಲಾರಿ ಹಾಗೂ ಬೈಕ್ ನಡುವೆ ಅಪಘಾತ 12ವರ್ಷದ ಬಾಲಕ ಸಾ*ವು

ಯಾದಗಿರಿ : ಜಿಲ್ಲೆಯ ಸುರಪುರ ತಾಲೂಕಿನ ಕುಂಬಾರಪೇಟ ಬಳಿ ಘಟನೆ ನಡೆದಿದ್ದು. ತಂದೆ ಮತ್ತು ಮಗ ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ ಹಿಂದಿನಿಂದ ಲಾರಿ ಗುದ್ದಿ ಅಪಘಾತ ಸಂಭವಿಸಿದೆ.

ಕೆಲಸದ ನಿಮಿತ್ತ ಬೈಕ್ ಸವಾರರು ಕುಂಬಾರಪೇಟೆಯಿಂದ ಹಸನಾಪುರ ಕಡೆಗೆ ಹೋಗುತ್ತಿದ್ದರು ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಲಾರಿ ಬೈಕ್​ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆಯುತ್ತಿದ್ದಂತೆ ಶೆಳ್ಳಗಿ ಗ್ರಾಮದ ಹಣಮಂತ ಕಂಬಾರ(12) ಕೆಳಗೆ ಬಿದ್ದು ತೀವ್ರವಾಘಿ ಗಾಯಗೊಂಡಿದ್ದಾನೆ. ಸ್ಥಳೀಯರು ಬಾಲಕನನ್ನು ಸುರಪುರ ಆಸ್ಪತ್ರೆಗೆ ದಾಖಲಿಸುವ ವೇಳೆಗೆ ಬಾಲಕ ಸಾವನ್ನಪ್ಪಿದ್ದನು ಎಂದು ಮಾಹಿತಿ ದೊರೆತಿದೆ.

ಬಾಲಕನ ತಂದೆಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಸುರಪುರ ಪೋಲೀಸ್ ಠಾಣಾ ಪೋಲಿಸರು ಭೇಟಿ ನೀಡಿ  ಪರಿಶೀಲನೆ ನಡೆಸಿದ್ದು. ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version