Site icon PowerTV

ಈಶ್ವರಪ್ಪ ವಿರುದ್ಧದ FIR ರದ್ದುಗೊಳಿಸುವಂತೆ ಕೋರಿ ರಾಷ್ಟ್ರಭಕ್ತ ಬಳಗದ ಸದಸ್ಯರಿಂದ ಪ್ರತಿಭಟನೆ

ಶಿವಮೊಗ್ಗ : ಈಶ್ವರಪ್ಪ ವಿರುದ್ಧ ದಾಖಲಾಗಿರುವ ಎಫ್.ಐ.ಆರ್. ಕೈಬಿಡುವಂತೆ ಆಗ್ರಹಿಸಿ ಶಿವಮೊಗ್ಗದಲ್ಲಿ ರಾಷ್ಟ್ರಭಕ್ತ ಬಳಗದ ಸದಸ್ಯರಿಂದ ಪ್ರತಿಭಟನೆ ನಡೆದಿದ್ದು. ಎಸ್​ಪಿ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಶಿವಮೊಗ್ಗ ಎಸ್.ಪಿ. ಗೆ  ಆಗ್ರಹ

ಇತ್ತೀಚಿಗೆ ಈಶ್ವರಪ್ಪ ವಿವಾದಿತ ಹೇಳಿಕೆ ನೀಡಿದ್ದರೆಂದು ಪೋಲಿಸರು ಸುಮೋಟೋ ಕೇಸು ದಾಖಲು ಮಾಡಿದ್ದರು. ನಿನ್ನೆ (ನ.15) ಜಯನಗರ ಪೋಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲಾಗಿತ್ತು ವಿವಾದಿತ ವಕ್ಫ್ ಆಸ್ತಿ ಕುರಿತು ಹೇಳಿಕೆ ನೀಡಿದ್ದ ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದರು. ಇದರ ಕುರಿತಾಗಿ ಇಂದು ಪ್ರತಿಭಟನೆ ನಡೆಸಲಾಗಿದೆ.

ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ನೀಡಿದ ಎಚ್ಚರಿಕೆಯಿಂದ ಕಾಂಗ್ರೆಸ್ ವಿಚಲಿತಗೊಂಡಿದೆ ಎಂದು ಆರೋಪ ಮಾಡಿದ್ದು.  ಕಾಂಗ್ರೆಸ್ ಸರ್ಕಾರ ನಮ್ಮ ನಾಯಕರ ವಿರುದ್ಧ ದುರುದ್ಧೇಶಪೂರ್ವಕವಾಗಿ ಕೇಸು ದಾಖಲಿಸಿದ್ದಾರೆಂದು ಎಸ್​ಪಿ ಕಛೇರಿಯ ಮುಂದೆ  ಪ್ರತಿಭಟನೆ ನಡೆಸಿದ್ದು. ಕೂಡಲೇ ಎಫ್​​ಐಆರ್​ ರದ್ದುಗೊಳಿಸಿಬೇಕು ಎಂದು ಒತ್ತಾಯಿಸಿದ್ದಾರೆ.

Exit mobile version