Site icon PowerTV

ಜಮೀರ್​ ನೀಡಿದ ಹೇಳಿಕೆಯನ್ನು ನಾನು ಖಂಡಿಸುತ್ತೇನೆ : ಡಿ.ಕೆ ಶಿವಕುಮಾರ್​

ಬೆಂಗಳೂರು : ಕುಮಾರಸ್ವಾಮಿ ವಿರುದ್ದ ಜಮೀರ್​ ಆಹಮದ್​​ ವಿವಾದಾತ್ಮಕ ಹೇಳಿಕೆಗೆ ಡಿಸಿಎಂ ಡಿ.ಕೆ ಶಿವಕುಮಾರ್​ ಅಸಮಧಾನ ವ್ಯಕ್ತಪಡಿಸಿದ್ದು. ಕಾಲಾ ಕುಮಾರಸ್ವಾಮಿ ಎಂದ ಜಮೀರ್​ಗೆ ಡಿಕೆಶಿ ಎಚ್ಚರಿಕೆ ನೀಡಿದ್ದಾರೆ.

ಮುಂದುವರಿದು ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್​ ‘ನಾನು ಅಂಥ ಹೇಳಿಕೆಯನ್ನ ಒಪ್ಪುವುದಿಲ್ಲ, ಜಮೀರ್​​ ಹೇಳಿಕೆಯನ್ನು  ಖಂಡಿಸುತ್ತೇನೆ, ಜಮೀರ್, ಅವರು ಏನು ಬೇಕಾದ್ರೂ ಕರೆದುಕೊಳ್ಳಲಿ, ಕರಿಯ ಅಂತಾದ್ರೂ ಅನ್ನಲಿ, ಕೊಚ್ಚೆ ಅಂತಾದ್ರೂ ಕರೆದುಕೊಳ್ಳಲಿ ನಾನು ಪಕ್ಷದ ಅಧ್ಯಕ್ಷನಾಗಿ ಹೇಳ್ತೇನೆ ಕಪ್ಪು ಬಿಳುಪು ಅಂತ ಕರೆಯೋದು ಸರಿಯಲ್ಲ ಎಂದು ಹೇಳಿದರು. ಜಮೀರ್ ವಿರುದ್ಧ ಕ್ರಮ ತೆಗೆದುಕೊಳ್ತೀರಾ ಎಂಬ ಪ್ರಶ್ನೆಗೆ
ಅದನ್ನ ಆಮೇಲೆ ನೊಡೋಣ ಎಂದ ಡಿಕೆಶಿ ಹೇಳಿದರು.

ಮಹರಾಷ್ಟ್ರ ಚುನಾವಣೆ ಬಗ್ಗೆ ಡಿಸಿಎಂ ಮಾತು 

ಸದಾಶಿವನಗರ ನಿವಾಸದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಮಹಾರಾಷ್ಟ್ರ ಚುನಾವಣೆ ಬಗ್ಗೆ ಹೇಳಿಕೆ ನೀಡಿದ್ದು. ನಾನು ನಿನ್ನೆ ಪ್ರಚಾರಕ್ಕೆ‌ ಹೋಗಿದ್ದೆ ಇವತ್ತು ಹೋಗ್ತಿದ್ದೇನೆ, ನಾಳೆನೂ‌ ಹೋಗ್ತೇನೆ. ಬಿಜೆಪಿಯವರು ನಮ್ಮ ಗ್ಯಾರೆಂಟಿ ಬಗ್ಗೆ ಅಪಪ್ರಚಾರ ಮಾಡ್ತಿದ್ದಾರೆ, ಇಂಪ್ಲಿಮೆಂಟ್ ಮಾಡಿಲ್ಲ ಅಂತ ಅಪಪ್ರಚಾರ ಮಾಡ್ತಿದ್ದಾರೆ
ನಾವು ಅವರಿಗೆ ಓಪನ್ ಆಫರ್ ಕೊಟ್ಟಿದ್ದೇವೆ ಎಂದು ಮರಾಠಿ ಪೇಪರ್​ಗಳ ಜಾಹೀರಾತು ಪ್ರದರ್ಶಿಸಿದರು.

ಮುಂದುವರಿದು ಮಾತನಾಡಿದ ಡಿಸಿಎಂ ನಾವು ಎಲ್ಲರೂ ಅಲ್ಲಿಗೆ ಹೋಗ್ತಿದ್ದೇವೆ,  ಜನ ಅಲ್ಲಿ ಬದಲಾವಣೆ ಬಯಸಿದ್ದಾರೆ. ಬೆಲೆ ಏರಿಕೆಯ ಬಿಸಿ ಅವರಿಗೆ ತಟ್ಟಿದೆ. ನಮಗೆ ಅಲ್ಲಿ 160 ಸೀಟು ಬರುವ ವಿಶ್ವಾಸವಿದೆ ಎಂದು
ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದರು.

Exit mobile version