Site icon PowerTV

ಮೊಬೈಲ್​ ಕೊಡಿಸು ಎಂದ ಮಗನನ್ನೆ ಕೊ*ಲೆ ಮಾಡಿದ ತಂದೆ

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಅಪ್ಪನಿಂದಲೇ ಮಗನ ಹತ್ಯೆಯಗಿದ್ದು ,14 ವರ್ಷದ ತೇಜಸ್ ಕೊಲೆಯಾದ ಬಾಲಕ ಎಂದು ಮಾಹಿತಿ ದೊರೆತಿದೆ. ಕುಮಾರಸ್ವಾಮಿ ‌ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಆರೋಪಿ ತಂದೆಯನ್ನು ಪೋಲಿಸರು ವಷಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ತೇಜಸ್ ಇತ್ತೀಚೆಗೆ ಶಾಲೆಗೆ ಹೋಗಲು ನಿರಾಕರಿಸುತ್ತಿದ್ದನು. ಶಾಲೆಗೆ ಹೋಗು ಎಂದು ಹೇಳಿದಕ್ಕೆ ಕೋಪಗೊಂಡಿದ್ದ ತೇಜಸ್ ಮೊಬೈಲ್ ಕೊಡಿಸು ಎಂದು ಹಠ ಮಾಡುತ್ತಿದ್ದನು. ಆದರೆ ಈಗಾಗಲೇ ‌ಒಂದು ಮೊಬೈಲ್ ‌ಹೊಡೆದು‌ ಹಾಕಿದ್ದ ಮಗನಿಗೆ ತಂದೆ ಮೊಬೈಲ್​ ಕೊಡಿಸಲು ನಿರಾಕರಿಸುತ್ತಿದ್ದನು. ಆದರೆ ಮಗಮತ್ತೊಂದು‌ ಮೊಬೈಲ್ ಕೊಡಿಸುವಂತೆ ಒತ್ತಾಯ ಮಾಡಿದ್ದಕ್ಕೆ  ಕೊಪಗೊಂಡ ಆರೋಪಿ‌ ರವಿ ಮಗನ ಮೇಲೆ  ಹಲ್ಲೆ ಮಾಡಿದ್ದಾನೆ.

ಹಲ್ಲೆಯ ನಂತರ ಬಾಲಕ ಕುಸಿದು ಬಿದ್ದಿದ್ದು.ಇದನ್ನು ನೋಡಿದ ತಂದೆ ನಾಟಕ ವಾಡುತ್ತಿದ್ದಾನೆಂದು  ನಿರ್ಲಕ್ಷ ಮಾಡಿದ್ದನು ಆದರೆ ನಂತರ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮೃತ ಪಟ್ಟಿದ್ದಾನೆ ಎಂದು ತಿಳಿದುಬಂದಿದೆ
ಘಟನೆ ಸಂಬಂದ ಕೆ ಎಸ್ ಲೇಔಟ್ ನಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ರವಿಯನ್ನು ಪೋಲಿಸರು ವಶಕ್ಕೆ ಪಡೆದು‌ ವಿಚಾರಣೆ ನಡೆಸುತ್ತಿದ್ದಾರೆ.

Exit mobile version