Site icon PowerTV

ಅಪ್ರಾಪ್ತ ಪತ್ನಿಯೊಂದಿಗೆ ಒಪ್ಪಿತ ಲೈಂಗಿಕ ಕ್ರಿಯೆಯೂ ಅತ್ಯಾಚಾರವೇ-ಬಾಂಬೆ ಹೈಕೋರ್ಟ್‌

ಬಾಂಬೆ : ಅಪ್ರಾಪ್ತ ಪತ್ನಿಯ ಜೊತೆಗೆ ದೈಹಿಕ ಸಂಬಂಧ ಹೊಂದುವುದು ಅತ್ಯಾಚಾರಕ್ಕೆ ಸಮ ಎಂದು ಬಾಂಬೆ ಹೈಕೋರ್ಟ್‌ ನಾಗಪುರ ಪೀಠ ತೀರ್ಪು ನೀಡಿದೆ. ಇಂತಹ ಪ್ರಕರಣದಲ್ಲಿ ಪತ್ನಿಯ ಸಮ್ಮತಿ ಇದ್ದರೂ ಅದು ಪರಿಗಣಿಸಲಾಗದು ಎಂದು ಹೇಳಿದೆ.

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪತ್ನಿಯೊಂದಿಗೆ, ಆಕೆಯ ಅನುಮತಿ ಇದ್ದರೂ ದೈಹಿಕ ಸಂಪರ್ಕ ನಡೆಸಿದರೆ ಅತ್ಯಾಚಾರ ಪ್ರಕರಣದಡಿ ದೂರು ದಾಖಲಿಸಬಹುದು’ ಎಂದು ನ್ಯಾಯಮೂರ್ತಿ ಗೋವಿಂದ ಸನಾಪ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಇತ್ತೀಚೆಗೆ ಹೇಳಿದೆ. ಪೋಕ್ಸೊ ಕಾಯ್ದೆಯಡಿ ತನ್ನನ್ನು ದೋಷಿ ಎಂದು ಘೋಷಿಸಿದ ವಾರ್ಧಾ ಜಿಲ್ಲೆಯ ನ್ಯಾಯಾಲಾಯವೊಂದರ ವಿರುದ್ದ ಮೇಲ್ಮನವಿ ಸಲ್ಲಿಸಿದ ವ್ಯಕ್ತಿಯೊಬ್ಬರ ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ಈ ರೀತಿ ಹೇಳಿದೆ. ಮೇಲ್ಮನವಿ ಸಲ್ಲಿಸಿದ ವ್ಯಕ್ತಿಯಯನ್ನು 2019ರ ಮೇ 25ರಂದು ಬಂಧಿಸಲಾಗಿತ್ತು. ಈ ವೇಳೆ ಅಪ್ರಾಪ್ತ ದೂರದಾರೆ 31 ವಾರಗಳ ಗರ್ಭಿಣಿಯಾಗಿದ್ದರು.

Exit mobile version