Site icon PowerTV

ಅಪ್ರಾಪ್ತ ಹುಡುಗನಿಂದ ದ್ವಿಚಕ್ರ ವಾಹನ ಚಾಲನೆ : 27ಸಾವಿರ ದಂಡ ವಿಧಿಸಿದ ನ್ಯಾಯಾಲಯ

ಮೈಸೂರು: ಅಪ್ರಾಪ್ತರು ವಾಹನ ಚಾಲನೆ ಮಾಡುವುದನ್ನು ತಡೆಯಲು ಕಠಿಣ ಕಾನೂನು ಕ್ರಮಗಳನ್ನು ಕೈಗೊಂಡಿದ್ದರು ಅದನ್ನು ಮೀರಿ ನಡೆಯುವರು ನಮ್ಮ ನಡುವೆ ಇದ್ದಾರೆ. ಅಂತವರು ಈ ವರದಿಯನ್ನು ನೋಡಲೆ ಬೇಕು.

ಅಪ್ರಾಪ್ತ ಬಾಲಕನೋರ್ವ ದ್ವಿಚಕ್ರ ವಾಹನ ಚಾಲನೆ ಮಾಡಿದ್ದಕ್ಕೆ ನ್ಯಾಯಾಲಯ ದುಬಾರಿ ದಂಡ ವಿಧಿಸಿದ್ದು. ಒಟ್ಟು 27 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಟಿ. ನರಸೀಪುರ ತಾಲ್ಲೂಕು ನ್ಯಾಯಾಲಯದಿಂದ ಇಂತಹ ಆದೇಶ ಬಂದಿದ್ದು ದಂಡದೊಂದಿಗೆ ಒಂದು ವರ್ಷಗಳ ಕಾಲ ದ್ವಿಚಕ್ರ ವಾಹನದ ಆರ್​.ಸಿಯನ್ನು ಅಮಾನತ್ತಿನಲ್ಲಿಡುವಂತೆ ಸೂಚನೆ ನೀಡಿದ್ದಾರೆ.

ದ್ವಿಚಕ್ರ ವಾಹನ ಚಾಲನೆ ಮಾಡಿದ ಹುಡುಗನಿಗೆ 25 ವರ್ಷದವರೆಗೆ ಡಿ.ಎಲ್​​ ನೀಡದಂತೆ ನ್ಯಾಯಾಲಯ ಆದೇಶ ನೀಡಿದ್ದು. ಇನ್ನಾದರು ಪೋಷಕರು ಎಚ್ಚೆತ್ತುಕೊಂಡು ಇದರ ಕುರಿತು ಎಚ್ಚರಿಕೆ ವಹಿಸಿಬೇಕಾಗಿದೆ.

Exit mobile version