Site icon PowerTV

ಹಣ ಪಡೆದು ವಂಚಿಸಿದ ಪೋಲಿಸ್​​ ವಿರುದ್ಧ ಕಮಿಷನರ್​​ ಮೊರೆ ಹೋದ ಮಾಜಿ ಪ್ರಿಯತಮೆ

ಬೆಂಗಳೂರು : ಬಸವನಗುಡಿ ಠಾಣೆ ಸಬ್ ಇನ್ಸ್ಪೆಕ್ಟರ್ ವಿರುದ್ದ ಮಾಜಿ ಪ್ರಿಯತಮೆಯೊಬ್ಬಳು ಪೋಲಿಸ್​ ಕಮಿಷನರ್​ಗೆ ದೂರು ನೀಡಿದ್ದು. ಹಣ ಪಡೆದು ಕಿರುಕುಳ ನೀಡಿದ ಪೋಲಿಸಪ್ಪನ ವಿರುದ್ಧ ನೊಂದ ಯುವತಿ ದೂರು ನೀಡಿದ್ದಾರೆ.

2020 ರಲ್ಲಿ ಪಿಎಸ್​ಐ ರಾಜಕುಮಾರ ಎಸ್ ಜೋಡಟ್ಟಿ ಗೆ ಫೇಸ್ಬುಕ್ ಮೂಲಕ ಪರಿಚಿತಳಾಗಿದ್ದ ಯುವತಿ ಎಂಬಿಬಿಎಸ್​ ವ್ಯಾಸಂಗ ಮಾಡುತ್ತಿದ್ದಳು. 2020ರಲ್ಲಿ ಪೋಲಿಸ್​​ ಅಕಾಡೆಮಿಯಲ್ಲಿ ಟ್ರೈನಿಂಗ್​ನಲ್ಲಿದ್ದ ಪಿಎಸ್​ಐ ಯುವತಿಯೊಂದಿಗೆ ಸ್ನೇಹ ಬೆಳೆಸಿಕೊಂಡು ಪ್ರೀತಿಯಲ್ಲಿ ಬೀಳಿಸಿಕೊಂಡಿದ್ದನು. ಇದಾದ ನಂತರ ಆಕೆಗೆ 2020ರಲ್ಲಿ ಪ್ರಪೋಸ್​ ಕೂಡ ಮಾಡಿದ್ದನು.

ಆದರೆ ಕಳೆದ ಕೆಲ ವರ್ಷಗಳಿಂದ ಪ್ರೀತಿಸಿ ಇತ್ತೀಚೆಗೆ ಅಸಲಿ ವರಸೆ ಶುರುಮಾಡಿದ್ದ ಪಿಎಸ್ಐ ತನ್ನ ಪ್ರಿಯತಮೆಯಿಂದ ಹಂತಹಂತವಾಗಿ 1.71 ಲಕ್ಷ ಹಣ ಪಡೆದಿದ್ದನು. ಅಲ್ಲದೇ ಇತ್ತೀಚೆಗೆ ನಗ್ನ ಪೊಟೋ ಕಳಿಸುವಂತೆ ಕಿರುಕುಳ ನೀಡಿದ ಆರೋಪವನ್ನು ಮಾಡಲಾಗಿದೆ. ಆದರೆ ಇದನ್ನ ನಿರಾಕರಿಸಿದ್ದಕ್ಕೆ ವೈದ್ಯೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನು ಎನ್ನಲಾಗಿದೆ. ಯುವತಿ ಹಣ ವಾಪಸ್ ಕೇಳಿದ್ದಕ್ಕೆ ಠಾಣೆಗೆ ಬಂದು ಕಲೆಕ್ಟ್ ಮಾಡಿಕೋ ಅಂತ ಅವಾಜ್ ಹಾಕಿದ್ದ ಪಿಎಸ್​ಐ  ವೈದ್ಯೆಯ ಕಾಲ್ ರೆಕಾರ್ಡ್ ತೆಗೆದು ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.  ನೊಂದ ವೈದ್ಯೆಯಿಂದ ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ ರಿಗೆ ದೂರು ನೀಡಲಾಗಿದೆ ಎಂದು ಮಾಹಿತಿ ದೊರೆತಿದೆ.

Exit mobile version