Site icon PowerTV

ಚಿನ್ನದ ಲೇಪನವಿದ್ದ ಟಿಪ್ಪು ಸುಲ್ತಾನ್ ಖಡ್ಗ ಲಂಡನ್‌ನಲ್ಲಿ 3.4 ಕೋಟಿ ರೂ.ಗೆ ಹರಾಜು!

ಮೈಸೂರಿನಲ್ಲಿ ಆಳ್ವಿಕೆ ನಡೆಸಿದ್ದ ಟಿಪ್ಪು ಸುಲ್ತಾನ್ 1799ರಲ್ಲಿ ಶ್ರೀರಂಗಪಟ್ಟಣ ಕದನದಲ್ಲಿ ಬಳಸಿದ್ದ ಎನ್ನಲಾದ ಖಡ್ಗ ಲಂಡನ್‌ನಲ್ಲಿ 3.4 ಕೋಟಿ ರೂಪಾಯಿಗೆ ಹರಾಜಾಗಿದೆ. ಖಡ್ಗವು ವಿಶಿಷ್ಟವಾದ ಡುಬ್ರಿ ವಿನ್ಯಾಸವನ್ನು ಹೊಂದಿದೆ. ಖಡ್ಗದ ಮೇಲೆ ಚಿನ್ನದ ಲೇಪನ ಇದ್ದು, ಅರೇಬಿಕ್ ಭಾಷೆಯಲ್ಲಿ ‘ಹ’ ಎಂದು ಕೆತ್ತಲಾಗಿದೆ. ಇದು ಟಿಪ್ಪು ತಂದೆ ಹೈದರ್ ಅಲಿ ಹೆಸರನ್ನು ಸೂಚಿಸುತ್ತದೆ.

ಯುದ್ದದಲ್ಲಿ ಬ್ರಿಟಿಷ್ ಸೇನೆಗೆ ಕೊಡುಗೆ ನೀಡಿದ್ದ ಕಾರಣಕ್ಕೆ ಕ್ಯಾಪ್ಟನ್ ಜೇಮ್ಸ್ ಆ್ಯಂಡ್ರ ಡಿಕ್ ಎಂಬ ಅಧಿಕಾರಿಗೆ ಬ್ರಿಟಿಷ್ ಸರ್ಕಾರ ಟಿಪ್ಪು ಸುಲ್ತಾನ್ ಬಳಸಿದ್ದ ಈ ಖಡ್ಗವನ್ನು ಉಡುಗೊರೆಯಾಗಿ ನೀಡಿತ್ತು. 2024ರವರೆಗೂ ಈ ಖಡ್ಗವನ್ನು ಡಿಕ್ ಕುಟುಂಬಸ್ಥರು ತಮ್ಮ ಬಳಿಯೇ ಇಟ್ಟುಕೊಂಡಿದ್ದರು.

ಮೈಸೂರಿನಲ್ಲಿ ಆಳ್ವಿಕೆ ನಡೆಸಿದ್ದ ಟಿಪ್ಪು ಸುಲ್ತಾನ್ 1799ರಲ್ಲಿ ಶ್ರೀರಂಗಪಟ್ಟಣ ಕದನದಲ್ಲಿ ಬಳಸಿದ್ದ ಎನ್ನಲಾದ ಖಡ್ಗ ಲಂಡನ್‌ನಲ್ಲಿ 3.4 ಕೋಟಿ ರೂಪಾಯಿಗೆ ಹರಾಜಾಗಿದೆ. ಖಡ್ಗವು ವಿಶಿಷ್ಟವಾದ ಡುಬ್ರಿ ವಿನ್ಯಾಸವನ್ನು ಹೊಂದಿದೆ. ಖಡ್ಗದ ಮೇಲೆ ಚಿನ್ನದ ಲೇಪನ ಇದ್ದು, ಅರೇಬಿಕ್ ಭಾಷೆಯಲ್ಲಿ ‘ಹ’ ಎಂದು ಕೆತ್ತಲಾಗಿದೆ. ಇದು ಟಿಪ್ಪು ತಂದೆ ಹೈದರ್ ಅಲಿ ಹೆಸರನ್ನು ಸೂಚಿಸುತ್ತದೆ ಎಂದು ಇತಿಹಾಸಕಾರರು ವಿಶ್ಲೇಷಿಸಿದ್ದಾರೆ.

Exit mobile version