Site icon PowerTV

ಸಚಿವ ಜಮೀರ್​ ಅಹಮದ್​ಗೆ ಜೀವ ಬೆದರಿ*: ಪುನೀತ್​ ಕೆರೆಹಳ್ಳಿ ವಿರುದ್ಧ FIR ದಾಖಲು

ಬೆಂಗಳೂರು : ಹಿಂದೂಪರ ಕಾರ್ಯಕರ್ತ ಪುನೀತ್​ಕೆರೆಹಳ್ಳಿ ವಿರುದ್ಧ ಜೀವಬೆದರಿಕೆ ಸೇರಿದಂತೆ ಜಾತಿಮತ್ತು ಧರ್ಮದ ಹೆಸರಿನಲ್ಲಿ ನಿಂಧನೆ ಮಾಡಿದ ಪ್ರಕರಣದಲ್ಲಿ ಎಫ್​ಐಆರ್​ ದಾಖಲಾಗಿದ್ದು. ಸಚಿವ ಜಮೀರ್​ ಅಹಮದ್​ಖಾನ್​ ಆಪ್ತ ಬೆಂಗಳೂರಿನ ಚಾಮರಾಜಪೇಟೆ ಪೋಲಿಸ್​ ಠಾಣೆಗೆ ದೂರು ನೀಡಿದ್ದಾರೆ.

ಸಚಿವ ಜಮೀರ್​ ಆಪ್ತನ ದೂರಿನಲ್ಲಿ ಪುನೀತ್​ ಕೆರೆಹಳ್ಳಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪದೇಪದೇ ಜಮೀರ್​ ಅವರನ್ನು ನಿಂಧನೆಯ ಶಬ್ದಗಳಿಂದ ನಿಂಧಿಸಿದ್ದು. ಅರೇಬಿಕ್​ ತಳಿ ಎಂದು ಹೇಳಿದ್ದಾರೆ ಎಂದು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅದರ ಜೊತೆಗೆ ‘ನೀನು ನಿಮ್ಮಪ್ಪನಿಗೆ ಹುಟ್ಟಿದ್ದರೆ ಹಾಸನ, ಮಂಡ್ಯದ ಗಡಿಯಲ್ಲಿ ನಿಂತು ಮತ್ತೊಮ್ಮೆ ಕರಿಯ ಕುಮಾರಸ್ವಾಮಿ ಎಂದು ಹೇಳಿ ಗಡಿ ದಾಟು ನೋಡೋಣ’ ಎಂದು ಹೇಳಿದ್ದಾರೆ ಮತ್ತು ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು  ದೂರು ನೀಡಲಾಗಿದೆ.

ದೂರು ದಾಖಲಿಸಿಕೊಂಡಿರುವ ಚಾಮರಾಜಪೇಟೆ ಪೋಲಿಸರು ಪುನೀತ್​ ಕೆರೆಹಳ್ಳಿ ವಿರುದ್ಧ ಎಫ್​​ಐಆರ್​ ದಾಖಲಿಸಿಕೊಂಡಿದ್ದಾರೆ.

Exit mobile version