ದರ್ಶನ್​​ ಬೆನ್ನುನೋವಿಗೆ ಶೀಘ್ರದಲ್ಲೆ ಮುಕ್ತಿ : ಶಸ್ತ್ರಚಿಕಿತ್ಸೆಗೆ ಸಿದ್ದತೆ ನಡೆಸಿಕೊಂಡ ಬಿಜಿಎಸ್​​ ವೈದ್ಯರು

ಬೆಂಗಳೂರು:ತೀವ್ರ ಬೆನ್ನುನೋವಿನಿಂದ ನರುಳುತ್ತಿರುವ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್​​ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದು. ದರ್ಶನ್​ಗೆ ಇರುವ ಸಮಸ್ಯೆಗೆ ವೈದ್ಯರು ಶಸ್ತ್ರಚಿಕಿತ್ಸೆಯೆ ಉತ್ತಮ ಪರಿಹಾರವೆಂದು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ಕಳೆದೊಂದು ವಾರದಿಂದ ಆಸ್ಪತ್ರೆಯಲ್ಲಿರುವ ದರ್ಶನ್​ ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದರ್ಶನ್​ನನ್ನು ಗಮನಿಸುತ್ತಿರುವ ವೈದ್ಯರು ಸರ್ಜರಿಗೆ ಗ್ರೀನ್​ ಸಿಗ್ನಲ್​ ನೀಡಿದ್ದಾರೆ. ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ಜೊತೆ ಚರ್ಚೆ ನಡೆಸಿರುವ ವೈದ್ಯರು ದರ್ಶನ್​ಗೆ ಪಿಜಿಯೋಥೆರಪಿ ಜೊತೆ ಶಸ್ತ್ರ ಚಿಕಿತ್ಸೆ ಅಗತ್ಯ ಎಂದು ಹೇಳಿದ್ದಾರೆ.

ದರ್ಶನ್​ಗೆ ಚಿಕಿತ್ಸೆ ನೀಡ್ತಿರುವ ವೈದ್ಯ ಡಾ.ನವೀನ್ ಅಪ್ಪಾಜಿಗೌಡ ದಾಸನಿಗೆ ಶಸ್ತ್ರಚಿಕಿತ್ಸೆಯ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಟ್ಟಿದ್ದು.ಕೇವಲ ಪಿಜಿಯೋಥೆರಪಿಯಿಂದ ಬೆನ್ನು ನೋವು ಸಂಪೂರ್ಣ ಗುಣಮುಖವಾಗಲು  ಸಾಧ್ಯವಿಲ್ಲ ಎಂದು ಮನವರಿಕೆ  ಮಾಡಿಕೊಟ್ಟಿದ್ದಾರೆ. ಈಗಾಗಲೇ ಸರ್ಜರಿಗೆ ವೈದ್ಯರ ತಂಡ ಸಿದ್ದತೆ ನಡೆಸುತ್ತಿದ್ದು. ಆದಷ್ಟು ಬೇಗ ಶಸ್ತ್ರಚಿಕಿತ್ಸೆ ನಡೆಸುತ್ತಾರೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES