Site icon PowerTV

ಶಾರುಖ್ ಭೇಟಿಗೆ 95 ದಿನ ಮನೆ ಹೊರಗೆ ಕಾದು ಕೂತ ಅಭಿಮಾನಿ

ಮುಂಬಯಿ: ಸಿನಿಮಾ ಮಂದಿಗೆ ಅಪಾರ ಅಭಿಮಾನಿಗಳಿರುತ್ತಾರೆ. ತನ್ನ ನೆಚ್ಚಿನ ನಟ, ನಟಿಯರನ್ನು ಭೇಟಿಯಾಗಿ ಅವರೊಂದಿಗೆ ಕನಿಷ್ಠ ಒಂದು ಫೋಟೋವನ್ನಾದರೂ ಕ್ಲಿಕ್ಕಿಸಿಕೊಳ್ಳಬೇಕೆನ್ನುವ ಆಸೆ ಬಹುತೇಕ ಅಭಿಮಾನಿಗಳಿಗಿರುತ್ತದೆ. ಅಧೇ ರೀತಿ ಇಲ್ಲೊಬ್ಬ ಅಭಿಮಾನಿ ತನ್ನ ನೆಚ್ಚಿನ ನಟ ಶಾರುಖ್​​ ಖಾನ್​​ರನ್ನು ಭೇಟಿಯಾಗಲು ಬರೊಬ್ಬರಿ 95 ದಿನಗಳ ಕಾಲ ಶಾರುಖ್​ ಮನೆಯ ಮುಂದೆ ಕಾದು ಕುಳಿತಿದ್ದಾನೆ.

ತನಗಾಗಿ ಕಾಯುತ್ತಿದ್ದ ಅಭಿಮಾನಿಯನ್ನು ರೊಮ್ಯಾನ್ಸ್ ಕಿಂಗ್ ಶಾರುಖ್ ಖಾನ್ ಭೇಟಿಯಾಗಿದ್ದು. ಆಗಿ ಅವರನ್ನು ಅತ್ಯಂತ ಪ್ರೀತಿಯಿಂದ ಮಾತನಾಡಿಸಿ ಫೋಟೋ ಕ್ಲಿಕ್ಕಿಸಿ ಖುಷಿ ಆಗಿಸಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಅಭಿಮಾನಿ ಆಗಿರುವ ಶೇರ್ ಅವರ ಕನಸು ನನಸಾಗುವಂತೆ ಮಾಡಿದೆ.

ಶೇರ್​ ಎಂಬ ವ್ಯಕ್ತಿ ಶಾರುಖ್​​ ಖಾನ್​​ರನ್ನು ಭೇಟಿಯಾಗಿದ್ದು ಶಾರುಖ್​​ರನ್ನು ಭೇಟಿಯಾಗುವುದಲ್ಲದೆ ಅವರು ನನಗೆ 10,000 ರೂಪಾಯಿಗಳನ್ನು ನೀಡಿದರು. ಅವರು 4,700 ರೂಪಾಯಿಯ ಪೆಟ್ರೋಲ್ ನನ್ನ ವಾಹನಕ್ಕೆ ಹಾಕಿದ್ದಾರೆ ಎಂದು ವಿಡಿಯೋವೊಂದರಲ್ಲಿ ಶೇರ್ ಅವರು ತಮ್ಮ ಖುಷಿಯ ಕ್ಷಣವನ್ನು ಹಂಚಿಕೊಂಡಿದ್ದಾರೆ.

Exit mobile version