Site icon PowerTV

ದಲಿತರ ಕೈಯಿಂದ ಮಲ ಗುಂಡಿ ಸ್ವಚ್ಛಗೊಳಿಸಿದ KSRTC ಅಧಿಕಾರಿಗಳು

ತುಮಕೂರು : ರಾಜ್ಯದಲ್ಲಿ ಬರೀ ಗೈಲಿ ಮಲ ಬಾಚುವ ಪದ್ದತಿ ಇನ್ನೂ ಜೀವಂತವಾಗಿದೆ. ಹೌದು, ಅದು ಕೂಡ ಗೃಹ ಸಚಿವ ಡಾ.ಜಿ ಪರಮೇಶ್ವರ್ ಸ್ವಕ್ಷೇತ್ರದಲ್ಲಿ. ತುಮಕೂರು ಜಿಲ್ಲೆ ಕೊರಟಗೆರೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಶೌಚಾಲಯದ ಪಿಟ್‌ನಿಂದ ಮಲ ಹೊರಬಂದಿತ್ತು. ಅದನ್ನು ಬಾಚಿ ಎತ್ತಿ ಹಾಕಲು ಕೂಲಿ ಕಾರ್ಮಿಕ ಹಾಗೂ ಬಾಲಕನನ್ನ ಬಳಕೆ ಮಾಡುವ ಮೂಲಕ ಅಮಾನವೀಯ ಘಟನೆಕ್ಕೆ ಸಾಕ್ಷಿಯಾಗಿದ್ದಾರೆ.

10 ವರ್ಷದ ದಲಿತ ಬಾಲಕ ಹಾಗೂ ಮತ್ತೊಬ್ಬ ಕೂಲಿ ಕಾರ್ಮಿಕ ಬರಿಗೈಯಲ್ಲಿ ಗುದ್ದಲಿ ಹಿಡಿದು ಮಲ ಸ್ವಚ್ಚಗೊಳಿಸಿದ್ದಾರೆ. ಇದನ್ನು ಪ್ರಶ್ನಿಸುತ್ತಿದ್ದಂತೆ ಕೆಲಸ ಸ್ಥಗಿತಗೊಳಿಸುದಂತೆ ಅಧಿಕಾರಿ ಸಿಬ್ಬಂದಿ ಸನ್ನೆ ಮಾಡಿದ್ದಾರೆ. ಕೂಡಲೇ ಕೆಲಸ ಬಿಟ್ಟು ಬಾಲಕ ಹಾಗೂ ವ್ಯಕ್ತಿ ತೆರಳಿದ್ದಾರೆ.

ಬಸ್ ನಿಲ್ದಾಣದ ಆವರಣದಲ್ಲಿರುವ ಪ್ರಯಾಣಿಕರ ಶೌಚಾಲಯದ ಪಿಟ್ ತುಂಬಿ ಫ್ಲಾಟ್ ಫಾರಂಗೆ ಹರಿದಿತ್ತು. ಪ್ರಯಾಣಿಕರು ದುರ್ನಾತದಲ್ಲೇ ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದ ಪರಿಸ್ಥಿತಿ ನಿರ್ಮಾಣವಾಗಿತ್ತು. ನಿಲ್ದಾಣದ ಫ್ಲಾಟ್ ಫಾರಂ ಗೆ ಹರಿಯುತ್ತಿದ್ದ ಮಲ ಸ್ವಚ್ಚಗೊಳಿಸಲು ಬಾಲಕನನ್ನ ಬಳಕೆ ಮಾಡಿದ್ದಾರೆ ಬೇಜವಬ್ದಾರಿ ಅಧಿಕಾರಿಗಳು..

Exit mobile version