Site icon PowerTV

ನಿಜವಾಯ್ತು ಕಾಲಜ್ಞಾನಿ ಭವಿಷ್ಯ; ಕೆನಾಡದಲ್ಲಿ ಹಿಂದೂ ದೇಗುಲದ ಮೇಲೆ ದಾಳಿ

ಜುಲೈ ತಿಂಗಳಲ್ಲಿ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಕೆನಾಡದಲ್ಲಿರುವ ಹಿಂದೂಗಳಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದರು. ಕೆನಾಡದಲ್ಲಿರುವ ಹಿಂದೂಗಳೇ ಎಚ್ಚರ, ಗ್ರಹರಾಶಿಗಳ ಆಧಾರದಿಂದ ಮುಂಬರುವ ದಿನಗಳಲ್ಲಿ ಆಪತ್ತು ಹೆಚ್ಚಾಗಲಿವೆ. ಈಗಾಲೇ ಮುಂಜಾಗರೂಕತೆಯನ್ನು ವಹಿಸುವುದು ಸೂಕ್ತ ಎಂದು ಸಂದೇಶ ನೀಡಿದ್ದರು. ಸದ್ಯ ಈ ಭವಿಷ್ಯ ನಿಜವಾಗಿದ್ದು, ಕೆನಡಾದ ಬ್ರಾನ್‌ನಲ್ಲಿರುವ ಹಿಂದೂ ಸಭಾ ದೇವಾಲಯದ ಆವರಣದಲ್ಲಿ ಭಕ್ತರ ಮೇಲೆ ಖಾಲಿಸ್ತಾನಿ ಪ್ರತ್ಯೇಕತಾವಾದಿಗಳು ದಾಳಿ ಮಾಡಿದ್ದಾರೆ. ಈ ದೇವಾಲಯವು ಟೊರೊಂಟೊದಿಂದ ಸುಮಾರು 50 ಕಿ.ಮೀ ದೂರದಲ್ಲಿದೆ. ದಾಳಿಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಖಾಲಿಸ್ತಾನಿ ಧ್ವಜ ಹಿಡಿದಿರುವುದು, ಭಕ್ತರನ್ನು ನಿಂದಿಸುತ್ತಾ ಹಲ್ಲೆ ನಡೆಸುತ್ತಿರುವುದು ವಿಡಿಯೋದಲ್ಲಿದೆ.

ಕೆನಡಾ ಸಂಸದ, ಕರ್ನಾಟಕ ಮೂಲದ ಚಂದ್ರ ಆರ್ಯ ಅವರು ವಿಡಿಯೊವನ್ನು ಹಂಚಿಕೊಂಡಿದ್ದು, ‘ಮಿತಿ ಮೀರಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರೂ ಈ ಘಟನೆಯನ್ನು ಖಂಡಿಸಿದ್ದಾರೆ. ‘ಬ್ರಾಂಪ್ಟನ್‌ನ ಹಿಂದೂ ಸಭಾ ಮಂದಿರದಲ್ಲಿ ನಡೆದ ಹಿಂಸಾಚಾರ ಕೃತ್ಯವನ್ನು ಒಪ್ಪಲಾಗದು. ಕೆನಡಾದ ಪ್ರತಿಯೊಬ್ಬರಿಗೂ ತಮ್ಮ ಧರ್ಮವನ್ನು ಮುಕ್ತಾಗಿ ಮತ್ತು ಸುರಕ್ಷಿತವಾಗಿ ಆಚರಿಸುವ ಹಕ್ಕು ಇದೆ’ ಎಂದು ಹೇಳಿದ್ದಾರೆ. ಹಾಗೆಯೇ, ಸಮುದಾಯದ ರಕ್ಷಣೆ ಹಾಗೂ ಪ್ರಕರಣದ ತನಿಖೆ ನಿಟ್ಟಿನಲ್ಲಿ ತ್ವರಿತವಾಗಿ ಪ್ರತಿಕ್ರಿಯಿಸಿದ ಪೊಲೀಸರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

Exit mobile version