Site icon PowerTV

ಮಾರಕಾಸ್ತ್ರದಿಂದ ಕೊಚ್ಚಿ ಪೋಲಿಸ್​ ಕಾನ್ಸ್​​ಟೇಬಲ್​ ಬರ್ಬರ ಕೊ*

ಹಾಸನ: ಮಾರಕಾಸ್ತ್ರಗಳಿಂದ ಕೊಚ್ಚಿ ಕಾನ್ಸ್‌ಟೇಬಲ್​ರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಹಾಸನ ಜಿಲ್ಲೆಯ ದುದ್ದ ಎಂಬಲ್ಲಿ ನಡೆದಿದೆ. ಹರೀಶ್.ವಿ (32) ಕೊಲೆಯಾದ ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದು. ಮದುವೆಯ ಆಮಂತ್ರಣ ಪತ್ರಿಕೆಯನ್ನು ಹಂಚಿ ಬರುವಾಗ ಘಟನೆ ಜರುಗಿದೆ.

ಹಾಸನದ ಅರಸೀಕೆರೆ ತಾಲ್ಲೂಕಿನ, ಬಾಗೇಶಪುರ ಗ್ರಾಮದವನಾದ ಹರೀಶ್​ ಬೆಂಗಳೂರಿನ KSISF ನಲ್ಲಿ ಕಾನ್ಸ್‌ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಇದೇ ತಿಂಗಳು ನವೆಂಬರ್​ 11 ರಂದು ಹರೀಶ್ ವಿವಾಹ ನಿಶ್ಚಯವಾಗಿದ್ದ ಹಿನ್ನೆಲೆ ನೆನ್ನೆ ಆಮಂತ್ರಣ ಪತ್ರಿಕೆಯನ್ನು ಹಂಚಲು ತನ್ನ KA-13-W-7272 ಬುಲೆಟ್ ಬೈಕ್‌ನಲ್ಲಿ ತೆರಳಿದ್ದಾಗ ಘಟನೆ ನಡೆದಿದೆ.

ಮದುವೆ ಆಮಂತ್ರಣ ಪತ್ರ ಹಂಚಿ ಮನೆಗೆ ವಾಪಾಸ್ ಆಗುತ್ತಿದ್ದ ವೇಳೆ ನಿನ್ನೆ ರಾತ್ರಿ ದುದ್ದ ಗ್ರಾಮದ ಹೊರವಲಯದಲ್ಲಿರುವ ಡಾಬಾ ಸರ್ಕಲ್‌ನಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಸ್ಥಳಕ್ಕೆ ಎಸ್ಪಿ ಮಹಮದ್ ಸುಜೇತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version