Site icon PowerTV

ವಕೀಲನ ಮೇಲೆ ಪೋಲಿಸರು ಹಲ್ಲೆ : ರೊಚ್ಚಿಗೆದ್ದ ವಕೀಲರ ಸಂಘ

ತುಮಕೂರು : ವಕೀಲನ ಮೇಲೆ‌ ಪೊಲೀಸ್ ಇನ್​ಸ್ಪೆಕ್ಟರ್ ನಿಂದ ಹಲ್ಲೆ ಆರೋಪ ಖಂಡಿಸಿ ವಕೀಲರ ಸಂಘದಿಂದ ಪ್ರತಿಭಟನೆ ಕೈಗೊಂಡಿದ್ದು. ತುಮಕೂರು ಜಿಲ್ಲಾ ವಕೀಲರ ಸಂಘದ ಮುಂದೆ ನೂರಾರು ವಕೀಲರು ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ವಕೀಲ ರವಿ ಎಂಬುವವರ ಜಮೀನನ್ನು ಪೋಲಿಸರು ಮತ್ತು ಬೆಸ್ಕಾಂ ಅಧಿಕಾರಿಗಳು ಒತ್ತುವರಿ ಮಾಡಲು ಬಂದಿದ್ದ ಸಂಧರ್ಭಧಲ್ಲಿ ಘಟನೆ ನಡೆದಿದ್ದು. ಈ ವೇಳೆ ವಕೀಲ ರವಿ ನೋಟಿಸ್​ ಮತ್ತು ಪರಿಹಾರ ನೀಡದೆ ಹೇಗೆ ಒತ್ತುವರಿ ಮಾಡುತ್ತೀರ ಎಂದು ವಿರೋಧಿಸಿದ್ದಾರೆ. ಈ ವೇಳೆ ತುಮಕೂರು ಇನ್ಸಪೆಕ್ಟರ್​ ದಿನೇಶ್​ ಕುಮರ್​ ಹಾಗೂ ವಕೀಲ ರವಿ ನಡುವೆ ವಾಗ್ವಾದವಾಗಿದ್ದು, ಪರಸ್ಪರ ನಿಂದಿಸಿಕೊಂಡಿದ್ದಾರೆ. ಈ ವೇಳೆ ಪರಸ್ಪರ ನೂಕಾಟ  ತಳ್ಳಾಟವಾಗಿದ್ದು. ಪೋಲಿಸ್​ ಅಧಿಕಾರಿ ದಿನೇಶ್​ ರವಿ ಮೇಲೆ ಹಲ್ಲೆ ಮಾಡಿದ್ದಾರ ಎಂದು ಆರೋಪಿಸಲಾಗಿದೆ.

ಇಬ್ಬರಿಂದ ತುಮಕೂರು ಜಿಲ್ಲಾ ಪೋಲಿಸ್​ಠಾಣೆಯಲ್ಲಿ ಪರಸ್ಪರ ದೂರು ದಾಖಲಾಗಿದ್ದು. ಪೋಲಿಸರಿಂದ ಆದ ಹಲ್ಲೆಯನ್ನು ವಿರೋಧಿಸಿ ತುಮಕೂರು ಜಿಲ್ಲಾ ವಕೀಲರ ಸಂಘದಿಂದ ಪ್ರತಿಭಟನೆ ನಡೆಯುತ್ತಿದ್ದು. ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದಿಂದ ಭಾರೀ ಪ್ರಮಾಣದ ಪ್ರತಿಭಟನೆ ನಡೆಸುತ್ತಿದ್ದು ಈ ಕೂಡಲೆ ಪೋಲಿಸ್​ ಅಧಿಕಾರಿಯ ವಿರುದ್ದ ಕ್ರಮ ಕೈಗೊಂಡು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರತಿಭಟನ ಸ್ಥಳಕ್ಕೆ ಎಸ್ಪಿ ಅಶೋಕ್​ ಭೇಟಿ ನೀಡಿದ್ದು. ಇದನ್ನು ವಿರೋಧಿಸಿದ ವಕೀಲರು ಅಶೋಕ್​ ಅವರ ಕಾರಿಗೆ ಮುತ್ತಿಗೆ ಹಾಕಿದ್ದಾರೆ. ಎಸ್ಪಿ ವಿರುಧ್ದ ವಕೀಲರು ಧಿಕ್ಕಾರ ಕೂಗಿದ್ದು. ವಕೀಲರ ಆಕ್ರೋಶಕ್ಕೆ ಎದರಿದ ಎಸ್ಪಿ ತಮ್ಮ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದು ಸ್ಥಳಕ್ಕೆ ಹಲ್ಲೆ ನಡೆಸಿದ ಅಧಿಕಾರಿಯನ್ನು ಕರೆಸುವಂತೆ ಅಗ್ರಹಿಸಿದ್ದಾರೆ.

Exit mobile version