Site icon PowerTV

ಪಟಾಕಿ ಮೇಲೆ ಕುಳಿತುಕೊಂಡು ಪ್ರಾಣವನ್ನೇ ಕಳೆದುಕೊಂಡ ಯುವಕ

ಆನೇಕಲ್ : ಪಟಾಕಿ ವಿಚಾರದಲ್ಲಿ ಹುಡುಗಾಟವಾಡಲು ಹೋಗಿ ಯುವಕನೋರ್ವ ಮೃತಪಟ್ಟ ಘಟನೆ ಬೆಂಗಳೂರಿನ ಕೋಣನಕುಂಟೆ ಬಳಿಯಲ್ಲಿ ನಡೆದಿದೆ. ಶಬರಿ (31) ಎಂಬ ಯುವಕನ ಹಿಂಬಾಗಕ್ಕೆ ತೀವ್ರವಾದ ಗಾಯವಾಗಿದ್ದು. ರಕ್ತಸ್ರಾವದಿಂದ ಮೃತ ಪಟ್ಟಿದ್ದಾನೆ ಎಂದು ಮಾಹಿತಿ ದೊರೆತಿದೆ.

ಅಕ್ಟೋಬರ್​ 31ರಂರದು ದೀಪಾವಳಿ ಹಿನ್ನಲೆ ಯುವಕರ ಗುಂಪೊಂದು ಪಟಾಕಿ ಜೊತೆಯಲ್ಲಿ ಹುಡುಗಾಟವಾಡಲು ಹೋಗಿ ಅವಘಡ ಸಂಭವಿಸಿದ್ದು. ಶಬರಿ ಎಂಬ ಯುವಕನೊಬ್ಬ ಪಟಾಕಿ ಹಚ್ಚಿ ಅದರ ಮೇಲೆ ಪಾತ್ರೆಯಂತಹ ವಸ್ತುವನ್ನು ಇಟ್ಟು ಅದರ ಮೇಲೆ ಕುಳಿತುಕೊಂಡಿದ್ದಾನೆ. ಒಮ್ಮೆಲೆ ಪಟಾಕಿ ಸ್ಪೋಟಗೊಂಡ ಹಿನ್ನಲೆ ಯುವಕ ಅಲ್ಲಿಯೆ ಕುಸಿದುಬಿದ್ದಿದ್ದಾನೆ.

ಕುಸಿದುಬಿದ್ದ ಯುವಕನ ಹಿಂಬಾಗಕ್ಕೆ ತೀವ್ರವಾದ ಗಾಯವಾಗಿದ್ದು ರಕ್ತಸ್ರಾವವಾಗಿದೆ. ಸ್ನೇಹಿತರು ಆತನನ್ನು ತಕ್ಷಣವೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದರು ಪ್ರಯೋಜನವಾಗದೆ ಯುವಕ ಮೃತಪಟ್ಟಿದ್ದಾನೆ. ಯುವಕರ ಹುಚ್ಚಾಟದ ವಿಡಿಯೋ ಪವರ್​ ಟಿವಿಗೆ ಲಭ್ಯವಾಗಿದೆ. ಕೋಣನ ಕುಂಟೆ ಪೋಲಿಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲಿಸರು ಹೆಚ್ಚನ ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ದೊರೆತಿದೆ.

Exit mobile version