Site icon PowerTV

ವಾಲ್ಮೀಕಿ ಹಗರಣದಲ್ಲಿ ಕೇವಲ ನಾಗೇಂದ್ರ ಮಾತ್ರವಲ್ಲ: ತುಕಾರಂ ಕೂಡ ಭಾಗಿಯಾಗಿದ್ದಾರೆ : ಶ್ರೀರಾಮುಲು

ಬಳ್ಳಾರಿ: ವಾಲ್ಮೀಕಿ ನಿಗಮದ ಹಗರಣದಲ್ಲಿ ಪಾಲು ಕೇವಲ ಮಾಜಿ ಸಚಿವ ಬಿ ನಾಗೇಂದ್ರ ಅವರಿಗೆ ಮಾತ್ರ ಹೋಗಿಲ್ಲ. ಅದರಲ್ಲಿ ಒಂದಷ್ಟು ಪಾಲು ಬಳ್ಳಾರಿ ಸಂಸದ ಇ ತುಕಾರಾಂ ಅವರಿಗೂ ಹೋಗಿದೆ ಎಂದು ಮಾಜಿ ಸಚಿವ ಬಿ ಶ್ರೀರಾಮುಲು ಅವರ ಹೇಳಿಕೆಗೆ ಸಂಡೂರು ಉಪ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರು ತಿರುಗೇಟು ನೀಡಿದ್ದಾರೆ.

ತುಕಾರಾಂ ಅವರ ಮೇಲೆ ಶ್ರೀರಾಮುಲು ಅವರು ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ತುಕಾರಾಂ ತಮ್ಮ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಇದ್ದವರು. ಸೋಲಿನ ಹತಾಶೆಯಲ್ಲಿ ಹೇಳಿಕೆ ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಶ್ರೀರಾಮುಲು ಮಾಡ್ತಾ ಇದ್ದಾರೆ. ಇದರಿಂದ ಏನೂ ಪ್ರಯೋಜನ ಆಗುವುದಿಲ್ಲ.

ತುಕಾರಾಂ ಅವರು ಕುಟುಂಬ ರಾಜಕಾರಣ ಮಾಡ್ತಾ ಇದ್ದಾರೆ ಎಂಬ ಶ್ರೀರಾಮುಲು ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಅನ್ನಪೂರ್ಣ ಅವರು, ಇಷ್ಟು ದಿನ ರೆಡ್ಡಿ ಅಂಡ್‌ ಗ್ಯಾಂಗ್‌ ಏನು ಮಾಡಿತು….? ಎಂಬುದು ಜನರಿಗೆ ತಿಳಿದಿದೆ. ರಾಮುಲು ಮನೆಯಲ್ಲಿ ಶಾಂತ, ಸಣ್ಣಪಕ್ಕೀರಪ್ಪ, ಸುರೇಶ್ ಬಾಬು, ಕರುಣಾಕರ ರೆಡ್ಡಿ, ಸೋಮಶೇಖರ ರೆಡ್ಡಿ ಇವರೆಲ್ಲ ಯಾರು ಆಗದ್ರೇ…?ನಾವು ಯಾವುದೇ ಕುಟುಂಬ ರಾಜಕಾರಣ ಮಾಡ್ತ ಇಲ್ಲ.ಜನರೇ ಒಪ್ಪಿ ಆಯ್ಕೆ ಮಾಡ್ತ ಇದ್ದಾರೆ. ಸಂತೋಷ್‌ ಲಾಡ್‌ ಹಾಗೂ ನಮ್ಮ ಕುಟುಂಬ ಸದಾ ಜನಸೇವೆಗೆ ಬದ್ಧರಾಗಿದ್ದೇವೆ. ಸೋಲಿನ ಹತಾಶೆಯಿಂದ ಮಾಜಿ ಸಚಿವ ಶ್ರೀರಾಮುಲು ಮಾತನಾಡಿದ್ದಾರೆ ಅಷ್ಟೆ.

Exit mobile version