Site icon PowerTV

‘ನಾ ಡ್ರೈವರ್, ನೀ ನನ್ನ ಲವ್ವರ್’ ಹಾಡಿನ ಗಾಯಕನಿಂದ ಹಲ್ಲೆ:ದೂರು ದಾಖಲಿಸಿದ ಅಣ್ಣ-ತಂಗಿ

ಚಿಕ್ಕೋಡಿ : ‘ನಾ ಡ್ರೈವರ್, ನೀ ನನ್ನ ಲವ್ವರ್’ ಹಾಡಿನ ಖ್ಯಾತಿಯ ಗಾಯಕನಿಂದ ಹಲ್ಲೆಮಾಡಿದ್ದಾನೆ ಎಂದು ಆರೋಪಿಸಿ ದೂರು ದಾಖಲಾಗಿದ್ದು. ಜಾನಪದ ಹಿನ್ನೆಲೆ‌ ಗಾಯಕ ಮಾಳು ನಿಪನಾಳನಿಂದ ಶೇಖರ್ ಹಕ್ಯಾಗೋಳ ಎಂಬಾತನ ಮೇಲೆ ಹಾಗೂ ಆತನ ಸಹೋದರಿ ಮೇಲೆ ಹಲ್ಲೆಯಾಗಿದೆ ಎಂದು ಮಾಹಿತಿ ದೊರೆತಿದೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಪನಾಳ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದ್ದು. ಗಾಯಕ ಮಾಳು ನಿಪನಾಳ ವೇಗವಾಗಿ ಕಾರು ಚಾಲನೆ ಮಾಡುತ್ತ ಶೇಖರ್​ ಮತ್ತು ಆತನ ಸಹೋದರಿಗೆ ತೊಂದರೆ ನೀಡಿದ್ದನು. ಇದಕ್ಕೆ ಶೇಖರ್​ ಹಕ್ಯಾಗೋಳ್​ನ ತಂಗಿ ಸಾವಕಾಶವಾಗಿ ಕಾರ್​ ಚಲಾಯಿಸು ಎಂದು ಹೇಳಿದಕ್ಕೆ, ಶೇಖರ್​​ ಬೈಕ್​ನ್ನು ಅಡ್ಡಗಟ್ಟಿ ನಿಲ್ಲಿಸಿ ಹಲ್ಲೆ ಮಾಡಿದ್ದಾನೆ ಎಂದು ಮಾಹಿತಿ ದೊರೆತಿದೆ.

ಬೈಕ್ ಮುಂದುಗಡೆ ಕಾರ್ ಅಡ್ಡಗಟ್ಟಿ ನಿಲ್ಲಿಸಿದ ಗಾಯಕ ನಾನು ಕಾರ್ ಹೀಗೆ ಚಲಾಸ್ತಿನಿ ಅದನ್ನೆಲ್ಲಾ ಕೇಳೋಕೆ ನಿವ್ಯಾರು ಎಂದು ಜಗಳ ಶುರು ಮಾಡಿದ್ದನು. ಮತ್ತು ಶೇಖರ್​ ಮತ್ತು ಆತನ ಅಕ್ಕನ ಮೇಲೆ ಮಾಳು ನಿಪನಾಳ ಹಾಗೂ ಸಂಗಂಡಿಗರು ಹಲ್ಲೆ ಮಾಡಿದರು ಎಂದು. ನನ್ನ ತಲೆ ಮತ್ತು ಎದೆ ಭಾಗಕ್ಕೆ ಹೊಡೆದರು ಮತ್ತು ಅಕ್ಕನ ಮೈಮೇಲಿನ ಒಡವೆಗಳನ್ನು ಕಿತ್ತು ಹಾಕಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದು. ಹಲ್ಲೆಗೆ ಒಳಗಾದ ಶೇಖರ್​ ಹಕ್ಯಾಗೋಳ ಚಿಕ್ಕೊಡಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ರಾಯಬಾಗ ಪೋಲಿಸ್​ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version