Site icon PowerTV

ಇಬ್ಬರ ಜಗಳ, ಬಿಡಿಸಲು ಬಂದವನಿಗೆ ಗುಂಡೇಟು : ಆಸ್ಪತ್ರೆಗೆ ದಾಖಲು

ಆನೇಕಲ್ : ಬೆಂಗಳೂರು ಹೊರವಲಯದಲ್ಲಿ ಮತ್ತೆ ಬಂದೂಕು ಸದ್ದು ಮಾಡಿದ್ದು. ಕ್ಷುಲ್ಲಕ ಜಗಳಕ್ಕೆ ಇಬ್ಬರ ಮಧ್ಯೆ ಜಗಳವಾಗಿದ್ದು ಅದನ್ನು ಬಿಡಿಸಲು ಬಂದ ವ್ಯಕ್ತಿಯು ಗುಂಡೇಟಿಗೆ ಗಾಯಗೊಂಡಿದ್ದಾನೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ದೊರೆತಿದೆ.

ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ‌ ಸಿಡಿಹೊಸಕೋಟೆಯಲ್ಲಿ ವಾಸವಾಗಿದ್ದ ಚಂದ್ರಶೇಖರ್​  ಮತ್ತು ಶ್ರೀನಿವಾಸ್​ ತಂದೆ ಮುನಿರಾಜು ಮಧ್ಯೆ ನೆನ್ನೆ ಸಂಜೆ ಕ್ಷುಲಕ ವಿಚಾರಕ್ಕೆ ಜಗಳವಾಗಿದ್ದು, ಇಬ್ಬರು ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ಈ ವೇಳೆ ಇವರಿಬ್ಬರ ಜಗಳವನ್ನು ಬಿಡಿಸಲು ಅಲ್ಲಿಯೆ ಇದ್ದ ಸಂಪಂಗಿ ಮತ್ತು ಜಯಮ್ಮ ಅಲ್ಲಿಗೆ ಬಂದಿದ್ದಾರೆ.

ಈ ವೇಳೆ ಉದ್ರಿಕ್ತನಾದ ಚಂದ್ರಶೇಖರ್​ ಬೇರೊಬ್ಬರ ಮನೆಯಿಂದ ಡಬಲ್​ ಬ್ಯಾರೆಲ್​ ಬಂದೂಕನ್ನು ತಂದು ಗುಂಡು ಹಾರಿಸಿದ್ದಾನೆ. ಬಂದೂಕಿನ ಗುರಿತಪ್ಪಿ ಸಂಪಗಿ ಮತ್ತು ಜಯಮ್ಮ ಗಾಯಗೊಂಡಿದ್ದಾರೆ. ಈ ವೇಳೆ ಸಂಪಗಿ ಎದೆ ಮತ್ತು ಹೊಟ್ಟೆ ಭಾಗಕ್ಕೆ ತೀವ್ರ ಗಾಯವಾಗಿದ್ದು. ಗಾಯಾಳುಗಳನ್ನು ಅನೇಕಲ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಸಂಪಗಿ ಸಾವು ಮತ್ತು ಬದುಕಿನ ನಡುವೆ ಹೋರಾಡುತ್ತಿದ್ದು. ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಆನೇಕಲ್​ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

 

Exit mobile version