Site icon PowerTV

ವಕ್ಫ್​ನಲ್ಲಿ 2.5 ಲಕ್ಷ ಕೋಟಿ ಹಗರನವಾಗಿದೆ ಎಂದು ವರದಿ ನೀಡಲಾಗಿದೆ : ಬ್ರಜೇಶ್​ ಚೌಟ

ಮಂಗಳೂರು : ಮಂಗಳೂರಿನಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಸುದ್ದಿಗೋಷ್ಟಿ ಮಾಡಿದರು. ಅವರು ವಕ್ಫ್ ಕಾನೂನು ಹಿಂದುಗಳ ಪಾಲಿಗೆ ಮರಣ ಶಾಸನದಂತೆ, ವಕ್ಫ್ ಜಮೀನು ಎಂದು ನೋಟಿಫೈ ಆದಲ್ಲಿ ಅದನ್ನು ಕೋರ್ಟಿನಲ್ಲಿ ಪ್ರಶ್ನಿಸುವಂತಿಲ್ಲ,ವಕ್ಫ್ ಟ್ರಿಬ್ಯುನಲ್ ನಲ್ಲಿ ಮಾತ್ರ ಪ್ರಶ್ನಿಸುವಂತೆ 1995ರಲ್ಲಿ ಕಾಂಗ್ರೆಸ್ ಸರ್ಕಾರ ತಿದ್ದುಪಡಿ ತಂದಿತ್ತು, ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿಯೆಂದು ನೋಟಿಸ್ ಕೊಡುವುದಕ್ಕೆ ಅವಕಾಶ ನೀಡಿದೆ
ಒಂದು ರೀತಿಯಲ್ಲಿ ದೇಶದ ಸಂವಿಧಾನ ವಿರೋಧಿ ಕಾನೂನು ಎಂದು ಹೇಳಿದರು.

ವಕ್ಫ್ ಕಾನೂನಿನ ಅತಿರೇಕಕ್ಕೆ ಕಡಿವಾಣ ಹಾಕಲು ಮೋದಿ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಮಸೂದೆಯನ್ನು ಜಂಟಿ ಸದನ ಸಮಿತಿ ಪರಿಶೀಲನೆಗೆ ಕೊಟ್ಟಿದೆ. ಇದರ ನಡುವಲ್ಲೇ ರಾಜ್ಯದಲ್ಲಿ ರೈತರ ಜಮೀನಿಗೆ ವಕ್ಪ್ ನೋಟಿಸ್ ಹಾಕಲಾಗಿದೆ. ಸಚಿವ ಜಮೀರ್ ಖಾನ್ ವಕ್ಪ್ ಅದಾಲತ್ ಮಾಡಿ ವಕ್ಫ್ ಒತ್ತುವರಿ ತೆರವಿಗೆ ಸೂಚನೆ ನೀಡಿದ್ದಾರೆ
ಸಿಎಂ ಸಿದ್ದರಾಮಯ್ಯ ಅಣತಿಯಂತೆ ಈ ಕೆಲಸವನ್ನು ಜಮೀರ್ ಖಾನ್ ಮಾಡಿದ್ದಾರೆ ಎಂದು ಆರೋಪಿಸಿದರು.

ವಕ್ಫ್ ಬಗ್ಗೆ ಪರಿಶೀಲನೆ ಆಗುವಾಗಲೇ 50 ವರ್ಷ ಹಳೆಯ ಆದೇಶವನ್ನು ಜಾರಿಗೆ ತರುವ ಹುನ್ನಾರ ಏಕೆ ?ವಕ್ಫ್ ಕಾನೂನು ಇರುವುದು ದೇಶದ ಬಡ ಮುಸ್ಲಿಮರ, ಮಹಿಳೆಯರ ಶ್ರೇಯೋಭಿವೃದ್ಧಿಗೆ, ಆದರೆ ಕಾಂಗ್ರೆಸ್ ಸರ್ಕಾರ ಮುಸ್ಲಿಮರನ್ನು 75 ವರ್ಷಗಳಿಂದ ಓಟ್ ಬ್ಯಾಂಕ್ ಮಾಡಿದ್ದು ಬಿಟ್ಟರೆ ಅವರ ಉದ್ಧಾರ ಮಾಡಿಲ್ಲ ರಾಜ್ಯದಲ್ಲಿ ಅತಿ ಹೆಚ್ಚು ವಕ್ಫ್ ಆಸ್ತಿಯನ್ನು ಕಾಂಗ್ರೆಸಿನ ಮುಸ್ಲಿಂ ನಾಯಕರೇ ಕಬಳಿಸಿದ್ದಾರೆ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಬ್ರಿಜೇಶ್​ ಚೌಟ ವಕ್ಫ್ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ವರದಿಯನ್ನು ಜಾರಿಗೆ ಒತ್ತಾಯಿಸುತ್ತೇವೆ. ಒಟ್ಟು ವಕ್ಫ್ ಆಸ್ತಿಯ 54 ಸಾವಿರ ಎಕರೆಯಲ್ಲಿ 29 ಸಾವಿರ ಎಕರೆ ಕಬಳಿಕೆಯಾಗಿದೆ ಎಂದು ವರದಿ ನೀಡಿದ್ದಾರೆ.ಸುಮಾರು 2.5 ಲಕ್ಷ ಕೋಟಿ ಹಗರಣವಾಗಿದೆ ಎಂದು ಹೇಳಿದೆ  ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕು. ರೈತರಿಗೆ ನೋಟಿಸ್ ಕೊಡುವ ಬದಲು ವಕ್ಫ್ ಆಸ್ತಿ ಕಬಳಿಸಿರುವ ಕುಳಗಳನ್ನು ಹೊರಗೆ ತನ್ನಿ. ಮಂಗಳೂರಿನಲ್ಲಿ 112 ವಕ್ಫ್ ಆಸ್ತಿಗಳಿದ್ದು ಅದರಲ್ಲಿ 37 ಆಸ್ತಿ ಅತಿಕ್ರಮಣ ಆಗಿದೆ
ಸರ್ಕಾರ ವಕ್ಫ್ ಆಸ್ತಿ ಬಗ್ಗೆ ನಿಷ್ಪಕ್ಷಪಾತ ತ‌ನಿಖೆ ಮಾಡಿಸಲಿ. ಮುಸ್ಲಿಂ ತುಷ್ಟೀಕರಣ ಬದಿಗಿಟ್ಟು ಕೇಂದ್ರ ಸರ್ಕಾರದ ವಕ್ಪ್ ತಿದ್ದುಪಡಿ ಕಾಯ್ದೆಗೆ ಬೆಂಬಲ ಘೋಷಿಸಲಿ  ಎಂದು ಸಂಸದ ಬ್ರಿಜೇಶ್ ಚೌಟ ಆಗ್ರಹಿಸಿದರು.

Exit mobile version