Site icon PowerTV

ಶಕ್ತಿ ಯೋಜನೆ ಇನ್ನೂ 8.5ವರೆ ಜಾರಿಯಲ್ಲಿರುತ್ತದೆ : ರಾಮಲಿಂಗ ರೆಡ್ಡಿ

ಬೆಂಗಳೂರು : ರಾಜ್ಯ ಸರ್ಕಾರ ಮಹತ್ವದ ಯೋಜನೆಯನ್ನು ಪರಿಷ್ಕರಿಸುವ ವಿಶಯಕ್ಕೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಹೇಳಿಕೆ ನೀಡಿದ್ದು ಯಾರಿಗೆ ಟಿಕೆಟ್​ ತೆಗೆದುಕೊಳ್ಳುವ ಶಕ್ತಿ ಇದೆಯೋ ಅವರು ಡಿ.ಕೆ ಶಿವಕುಮಾರ್​ ಅವರಿಗೆ ಹೇಳಿದ್ದಾರೆ. ಅದನ್ನು ಡಿ.ಕೆ ಶಿವಕುಮಾರ್ ಪ್ರಸ್ತಾಪ ಮಾಡಿದರು ಎಂದು ಹೇಳಿದರು.

ಮುಂದುವರಿದು ಮಾತನಾಡಿದ ರಾಮಲಿಂಗರೆಡ್ಡಿ ಶಕ್ತಿ ಕಾರ್ಯಕ್ರಮ ಇನ್ನೂ 8.5 ವರ್ಷ ಇರುತ್ತದೆ‌.
ಈ ಅವಧಿಯ 3.5 ಹಾಗೂ ಮುಂದಿನ ಅವಧಿ 5 ವರ್ಷ ಜಾರಿಯಲ್ಲಿ ಇರುತ್ತದೆ ಎಂದು ಮುಂದಿನ ಬಾರಿಯು ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಜೊತೆಗೆ ಇಲ್ಲಿಯವರೆಗೆ ಶಕ್ತಿ ಕಾರ್ಯಕ್ರಮದಲ್ಲಿ 318 ಕೋಟಿ ಜನ ಉಚಿತವಾಗಿ ಪ್ರಯಾಣಿಸಿದ್ದಾರೆ.ಗೃಹ ಜ್ಯೋತಿಗೆ 1ಕೋಟಿ 20 ಲಕ್ಷ ಜನ ಆನ್‌ಲೈನ್ ನಲ್ಲಿ ಅಪ್ಲಿಕೇಷನ್ ಹಾಕಿ ಸದುಪಯೋಗ ಪಡೆದಿದ್ದಾರೆ ಮತ್ತು ಗೃಹ ಲಕ್ಷ್ಮಿಗೆ 1ಕೋಟಿ 61 ಲಕ್ಷ ಫಲಾನುಭವಿಗಳಿದ್ದಾರೆ ಎಂದು ಹೇಳಿದರು.

ಜೊತೆಗೆ ಶಕ್ತಿ ಯೋಜನೆ ಬೇಡ ಎನ್ನುವವರು ಬಹಳ ಕಡಿಮೆ. ಯಾರೋ ಬೆನ್ಸ್ ಕಾರಿನಲ್ಲಿ ಓಡಾಡುವವರು ಮಾತ್ರ ವಿರೋಧ ಮಾಡುತ್ತಾರೆ. ಬಡವರ ವಿರೋಧಿಗಳು ಮಾತ್ರ ಶಕ್ತಿ ಯೋಜನೆಯನ್ನ ವಿರೋಧ ಮಾಡುತ್ತಾರೆ.
ಹಿಂದೆ ಉಚಿತವಾಗಿ ಅಕ್ಕಿ ಕೊಟ್ಟಾಗ ಫ್ರೀ ಅಕ್ಕಿ ಕೊಟ್ಟರೆ ಸೋಂಬೇರಿ ಆಗುತ್ತಾರೆ ಅಂತ ಮಾತನಾಡಿದ್ರು.
ಈಗ ಅವರೆ  ಶಕ್ತಿ ಯೋಜನೆ ಬಗ್ಗೆ ಮಾತನಾಡುತ್ತಿದ್ದಾರೆ. ಎಲ್ಲದಕಿಂತ ವಿಶೇಷವಾಗಿ ಮಹಿಳೆಯರು ಸಂತೋಷವಾಗಿದ್ದಾರೆ.ಅಂಗವಿಕಲರಿಗೆ ಲಿಮೊಟೆಡ್ ಇನ್ನೂ ಹೆಚ್ಚು ಮಾಡಿ ಎಂದಿದ್ದಾರೆ. ಗಂಡಸರು ಕೂಡ ನಮಗೂ ಅವಕಾಶ ಮಾಡಿಕೊಡಿ ಎಂದು ಕೇಳುತ್ತಾರೆ‌ ಎಂದು ಹೇಳಿದರು.

 

Exit mobile version