Site icon PowerTV

ಪಟಾಕಿ ಸಿಡಿಸುವ ವಿಚಾರಕ್ಕೆ ಜಗಳ : ಕೊಲೆಯಲ್ಲಿ ಅಂತ್ಯ

ರಾಯಚೂರು : ಪಟಾಕಿ ಹಚ್ಚುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿದ್ದು.ಮನೆ ಮುಂದೆ ಪಟಾಕಿ ಹಚ್ಚಬೇಡಿ ಎಂದಿದ್ದಕ್ಕೆ ಕೊಲೆಯಾದ ಘಟನೆ ರಾಯಚೂರಿನಲ್ಲಿ ನಡೆದಿದೆ. ಬಡಿದಾಟದಲ್ಲಿ ನರಸಿಂಹಲು(37) ಎಂಬುವವನ ಕೊಲೆ ಮಾಡಲಾಗಿದೆ.

ರಾಯಚೂರು ನಗರದ ರಾಗಿಮಾನಗಡ್ಡ ಬಡಾವಣೆಯಲ್ಲಿ ಘಟನೆಯಾಗಿದ್ದು. ಕೊಲೆ ಮಾಡಿರುವ ಹಂತಕರು ನರಸಿಂಹಲು ಮನೆಯ ಮುಂದೆ ಪಟಾಕಿ ಸಿಡಿಸುತ್ತಿದ್ದರು, ಇದಕ್ಕೆ ವಿರೋಧಿಸಿದ್ದ ನರಸಿಂಹಲು ಮನೆಯಲ್ಲಿ ಮಕ್ಕಳಿದ್ದಾರೆ ಮನೆಮುಂದೆ ಪಟಾಕಿ ಸಿಡಿಸಬೇಡಿ ಎಂದು ಹೇಳಿದ್ದನು.

ಇದರಿಂದಾಗಿ ಕೆರಳಿದ್ದ ಹಂತಕರು ನರಸಿಂಹಲು ಮೇಲೆ ಹಲ್ಲೆಗೆ ಮುಂದಾಗಿದ್ದರು. ಎರಡು ಗುಂಪುಗಳ ಮಧ್ಯೆ ಪರಸ್ಪರ ಬಡಿದಾಟವಾಗಿದ್ದು. ವಿನೋದ, ರೋಹನ್, ಈಶ್ವರ್, ನರೇಶ, ಪ್ರಕಾಶ, ಚಿಂಟು, ಅಖಿಲ್ ಎಂಬುವವರಿಂದ ನರಸಿಂಹಲು ಮೇಲೆ  ತಲ್ವಾರ್, ಕಟ್ಟಿಗೆ ಹಾಗೂ ಕೈಯಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹತ್ಯೆ ಸಂಬಂಧ ರಾಯಚೂರು ಪಶ್ಷಿಮ ಪೋಲಿಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಸರು 7 ಜನರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಉಳಿದ ಗಾಯಾಳುಗಳನ್ನು ನವೋದಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

Exit mobile version