Site icon PowerTV

ಕರಿಮಣಿ ಮಾಲೀಕನಾಗಲು ಹೊರಟ ಡಾಲಿ ಧನಂಜಯ್ : ಮದುವೆ ಯಾವಾಗ ಗೊತ್ತೆ?

ಬೆಂಗಳೂರು : ಡಾಲಿ ಧನಂಜಯ್​ ದೀಪಾವಳಿ ಹಬ್ಬಕ್ಕೆ ತಮ್ಮ ಅಭಿಮಾನಿಗಳಿಗೆ ಸಂತಸದ ಸುದ್ದಿಯನ್ನು ನೀಡಿದ್ದು. ಇಷ್ಟು ದಿನ ಬ್ಯಾಚುಲರ್​ ಆಗಿ ಜೀವನ ನಡೆಸುತ್ತಿದ್ದ ನಟರಾಕ್ಷಸ ಇದೀಗ ಹಸಮಣೆ ಏರಲು ಸಿದ್ದರಾಗಿದ್ದಾರೆ.

ದೀಪಾವಳಿ ಹಬ್ಬಕ್ಕೆ ಶುಭ ಸುದ್ದಿ ನೀಡಿರುವ ನಟರಾಕ್ಷಸ, ಹಲವು ದಿನಗಳಿಂದ ತಮ್ಮ ಫ್ಯಾನ್ಸ್​ ಕೇಳುತ್ತಿದ್ದ ಮೌನಕ್ಕೆ ತೆರೆ ಎಳೆದಿದ್ದಾರೆ. ಬೆಳಕಿನ ಹಬ್ಬ ದೀಪಾವಳಿಗೆ ಡಾಲಿ ಧನಂಜಯ್​ ತಮ್ಮ ಬಾಳ ಸಂಗಾತಿಯನ್ನು ಪರಿಚಯಿಸಿದ್ದು.ಕೋಟೆನಾಡಿನ ಕನ್ಯೆಯೊಂದಿಗೆ ಹಸಮಣೆ ಏರಲಿದ್ದಾರೆ ಎಂದು ಮಾಹಿತಿ ದೊರೆತಿದೆ.

ಹಲವು ದಿನಗಳಿಂದ ತಮ್ಮ ಮದುವೆಯ ಬಗ್ಗೆ ಮೌನ ಹೊಂದಿದ್ದ ನಟ ಧನಂಜಯ್​ ಇದೀಗ ಚಿತ್ರದುರ್ಗದ ಧನ್ಯತಾ ಅವರನ್ನು ವರಿಸುವುದಾಗಿ ಹೇಳಿದ್ದಾರೆ. ವೃತ್ತಿಯಲ್ಲಿ ವೈದ್ಯೆಯಾಗಿರುವ ಧನ್ಯತಾ ಅವರೊಂದಿಗೆ ಮುಂದಿನ ವರ್ಷ ಫೆಬ್ರವರಿ 16ರಂದು ವಿವಾಹವಾಗಲಿದ್ದಾರೆ ಎಂದು ತಿಳಿದುಬಂದಿದೆ. ಡಾಲಿ ವಿವಾಹ ಮೈಸೂರಿನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದ್ದು ಮೈಸೂರಿನ ಎಕ್ಸಿಬಿಷನ್ ಗ್ರೌಂಡ್ ನಲ್ಲಿ ಕಲ್ಯಾಣ ನೆರವೇರಲಿದೆ. ಡಾಲಿ ಮದುವೆ ದಕ್ಷಿಣ ಭಾರತದ ಸಿನಿಮಾ ತಾರೆಯರು ಸೇರಿದಂತೆ , ರಾಜಕೀಯ ಗಣ್ಯರು ಸಾಕ್ಷಿಯಾಗಲಿದ್ದಾರೆ.

Exit mobile version