Site icon PowerTV

ಬಿಜಿಎಸ್​ ಆಸ್ಪತ್ರೆಗೆ ದರ್ಶನ್​ ದಾಖಲು? ಔಷದಿಯಿಂದ ಗುಣಪಡಿಸಲು ಮನವಿ ಮಾಡಿದ ದಾಸ

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ದರ್ಶನ್​ ತೀವ್ರ ಬೆನ್ನು ನೋವಿನ ಹಿನ್ನಲೆ ನ್ಯಾಯಾಲಯದಿಂದ 6 ವಾರಗಳ ಕಾಲ ಮೆಡಿಕಲ್​ ಬೇಲ್​ ಪಡೆದು ಹೊರಗೆ ಬಂದಿದ್ದು. ನೆನ್ನೆ ಮಗನೊಂದಿಗೆ ಹುಟ್ಟುಹಬ್ಬ ಆಚರಣೆ ಮಾಡಿದ ಡಿ ಬಾಸ್​ ಇಂದು ಆಸ್ಪತ್ರೆಗೆ ದಾಖಲಾಗುತ್ತಾರೆ ಎಂದು ಮಾಹಿತಿ ದೊರೆತಿದೆ.

ಇಂದು ಮಧ್ಯಾಹ್ನ 1.30 ರ ನಂತರ ನಟ ದರ್ಶನ್ ಬಿಜಿಎಸ್ ಆಸ್ಪತ್ರೆಗೆ ದಾಖಲಾಗುತ್ತಾರೆ ಎಂದು ಮಾಹಿತಿ ದೊರೆತಿದ್ದು. ಈಗಾಗಲೇ ದರ್ಶನ್ ಕುಟುಂಬಸ್ಥರಿಂದ ಬಿಜಿಎಸ್ ಆಸ್ಪತ್ರೆ ವೈದ್ಯರಿಗೆ ಮಾಹಿತಿ ನೀಡಲಾಗಿದೆ.
ಇಂದು ಮಧ್ಯಾಹ್ನದ ನಂತರ ನಟ ದರ್ಶನ್ ಗೆ ಹಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿ, ನಾಳೆಯೊಳಗೆ ವರದಿಗಳನ್ನು ನೀಡಲಾಗುತ್ತದೆ ಎಂದು ಹೇಳಲಾಗಿದೆ. ಇಂದು ದರ್ಶನ್​ಗೆ ಇಸಿಜಿ, ಸ್ಕ್ಯಾನಿಂಗ್, ಬಿಪಿ, ಶುಗರ್, ರಕ್ತ ಪರೀಕ್ಷೆ, ಲಿವರ್ ಫಂಕ್ಷನ್ , (LFT) MRI ಟೆಸ್ಟ್ ಮಾಡಲಾಗುತ್ತದೆ ಎಂದು ಮಾಹಿತಿ ದೊರೆತಿದ್ದು. ಮೊದಲಿಗೆ ಫಿಸಿಯೋ ಥೆರಪಿ ಹಾಗೂ ಔಷಧಿಯಿಂದ ಗುಣಪಡಿಸಲು ಪ್ರಯತ್ನಿಸಲಾಗುತ್ತದೆ ಒಂದು ವೇಳೆ ಔಷದಿಯಿಂದ ಸಾಧ್ಯವಾಗದೆ ಇದ್ದರೆ ಸರ್ಜರಿಯನ್ನು ಲಾಸ್ಟ್​ ಆಪ್ಪನ್​ ಆಗಿ ಇಟ್ಟಿಕೊಂಡಿದ್ದಾರೆ ಎಂದು ತಿಳಿಯಲಾಗಿದೆ.

ನಗರದ ಕೆಂಗೇರಿ ಬಳಿ ಇರುವ ಗ್ಲೆನಿಗಲ್ಸ್ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ವೈದ್ಯರ ಬಳಿ ಅಪಾಯಿಂಟ್ಮೆಂಟ್​ ತೆಗೆದುಕೊಳ್ಳಲಾಗಿದ್ದು.ಇಂದು ಡಾಕ್ಟರ್​ರನ್ನು ಭೇಟಿ ಮಾಡಿ ಅವರು ಅಡ್ಮಿಟ್​ ಆಗಬೇಕು ಎಂದರೆ ಮಾತ್ರ ಆಡ್ಮಿಟ್​ ಆಗಲಿದ್ದಾರೆ ಎಂದು ಮಾಹಿತಿ ದೊರೆತಿದೆ.

Exit mobile version