Saturday, August 23, 2025
Google search engine
HomeUncategorizedಇಬ್ಬರು ಭಾರತೀಯ ಪ್ರಯಾಣಿಕರಿಂದ 7 ಕೋಟಿ ಮೌಲ್ಯದ ಮಾಧಕ ವಸ್ತು ವಶ

ಇಬ್ಬರು ಭಾರತೀಯ ಪ್ರಯಾಣಿಕರಿಂದ 7 ಕೋಟಿ ಮೌಲ್ಯದ ಮಾಧಕ ವಸ್ತು ವಶ

ಹೈದರಾಬಾದ್​ :  ಬ್ಯಾಂಕಾಕ್‌ನಿಂದ ಬರುತ್ತಿದ್ದ ಇಬ್ಬರು ಭಾರತೀಯ ಪ್ರಮಾಣಿಕರಿಂದ 7 ಕೋಟಿ ಮೌಲ್ಯದ 7 ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ಪ್ರಯಾಣಿಕರ ಚೆಕ್-ಇನ್ ಲಗ್ಗೇಜ್ ಪರಿಶೀಲಿಸಿದಾಗ ಚಾಕೊಲೇಟ್ ಕವರ್‌ಗಳಲ್ಲಿ 13 ವ್ಯಾಕ್ಯೂಮ್-ಪ್ಯಾಕ್ಸ್‌ ಪಾರದರ್ಶಕ ಪ್ಯಾಕೆಟ್‌ಗಳು ಪತ್ತೆಯಾಗಿವೆ ಎಂದು ಡಿಆರ್‌ಐ ಅಧಿಕಾರಿಗಳು ತಿಳಿಸಿದ್ದಾರೆ.  13 ಪ್ಯಾಕೆಟ್‌ಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಇರುವುದು ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ. 1985ರ ಎನ್‌ಡಿಪಿಎಸ್‌ ಕಾಯ್ದೆ, ನಿಬಂಧನೆಗಳ ಅಡಿಯಲ್ಲಿ ಇಬ್ಬರು ಪ್ರಯಾಣಿಕರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಮತ್ತು ತನಿಖೆ ಪ್ರಗತಿಯಲ್ಲಿದೆ ಎಂದು ಮಾಹಿತಿ ದೊರೆತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments