Site icon PowerTV

ಲಾರಿ ಡಿಕ್ಕಿ: ಮಣ್ಣಿನಡಿ ಸಿಲುಕಿದ್ದ ಮಹಿಳೆಯ ರಕ್ಷಣೆ

ಉಡುಪಿ: ಸ್ಕೂಟಿಯಲ್ಲಿ ಸಾಗುತ್ತಿದ್ದ ಮಹಿಳೆಗೆ ಮಣ್ಣು ತುಂಬಿದ ಲಾರಿ ಡಿಕ್ಕಿ ಹೊಡೆದು, ಲಾರಿ ಮಗುಚಿ ಬಿದ್ದು ಮಹಿಳೆ ಮಣ್ಣಿನಡಿ ಸಿಲುಕಿ ಅದೃಷ್ಟವಶಾತ್ ಪಾರಾದ ಘಟನೆ ಬೈಂದೂರು ತಾಲೂಕಿನ ನಾಗೂರು ಉಪ್ರಳ್ಳಿಯಲ್ಲಿ ಸಂಭವಿಸಿದೆ. ಮಣ್ಣಿನಡಿ ಸಿಲುಕಿದ ಮಹಿಳೆ ಉಪ್ರಳ್ಳಿಯ ಆರತಿ ಶೆಟ್ಟಿ ಎಂದು ತಿಳಿದು ಬಂದಿದೆ.

ಮಣ್ಣು ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿ ಹೋಗುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಮಗುಚಿ ಬಿದ್ದಿದೆ. ಲಾರಿಯಲ್ಲಿದ್ದ ಮಣ್ಣು ಸ್ಕೂಟರಲ್ಲಿದ್ದ ಮಹಿಳೆ ಮೇಲೆ ಬಿದ್ದು ಮಣ್ಣಿನಡಿಯಲ್ಲಿ ಮಹಿಳೆ ಸಿಲುಕಿ ಕೊಂಡಿದ್ದಾರೆ.

ಅಲ್ಲೇ ಸ್ಥಳದಲ್ಲಿದ್ದ ಸಮಾಜ ಸೇವಕ ಕೋಡಿ ಅಶೋಕ ಪೂಜಾರಿ ಅವರು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಅಶೋಕ್ ಪೂಜಾರಿ ತನ್ನ ಕೈಗಳಿಂದಲೇ ಮಣ್ಣನ್ನು ತೆಗೆದು ಮಹಿಳೆಯನ್ನು ರಕ್ಷಿಸಿ ನಂತರ ಸ್ಥಳೀಯರ ಸಹಕಾರದಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದರು.ಕ್ಲಪ್ತ ಸಮಯದಲ್ಲಿ ಮಹಿಳೆಯನ್ನು ರಕ್ಷಿಸಿ ಜೀವ ಉಳಿಸಿದ ಸಮಾಜ ಸೇವಕ ಕೋಡಿ ಅಶೋಕ್ ಪೂಜಾರಿ ಅವರಿಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Exit mobile version