Site icon PowerTV

ಹಾಸನಾಂಬ ದೇವಾಲಯದ VIP ಮತ್ತು VVIP ಪಾಸ್​ ರದ್ದು: ಜಿಲ್ಲಾಡಳಿತದ ಆದೇಶ

ಹಾಸನ : ವರ್ಷಕೊಮ್ಮೆ ದರ್ಶನ ಕರುಣಿಸುವ ಹಾಸನ ಅಧಿದೇವತೆ ಹಾಸನಾಂಬೆಯ ದೇವಾಲಯ ತುಂಬಿತುಳುಕುತ್ತಿದ್ದು. VIP ಮತ್ತು VVIP ಸಾಲುಗಳಲ್ಲಿಯು ಜನರು ಹೆಚ್ಚಾಗುತ್ತಿರುವ ಹಿನ್ನಲೆ ಹಾಸನ ಜಿಲ್ಲಾಡಳಿತ ದೇವರ ದರ್ಶನಕ್ಕೆ ನೀಡುತ್ತಿದ್ದ ಪಾಸ್​ಗಳನ್ನು ರದ್ದುಗೊಳಿಸಿದೆ.

ಸಾಲು ಸಾಲು ರಜೆ ಹಿನ್ನೆಲೆ ಹಾಸನಾಂಬೆ ದೇವಾಲಯದಲ್ಲಿ ಜನರು ತುಂಬಿತುಳುಕುತ್ತಿದ್ದು. ಮಳೆಯನ್ನು ಲೆಕ್ಕಿಸದೆ ಜನರು ದೇವರ ದರ್ಶನಕ್ಕೆ ಸಾಲುಕಟ್ಟಿ ನಿಂತಿದ್ದಾರೆ. 300ರೂ ಮತ್ತು 1000 ರೂಪಾಯಿಗಳ ಪಾಸ್​​ ನೀಡುತ್ತಿದ್ದ ಜಿಲ್ಲಾಡಳಿತ ಈಗ ಅವುಗಳ ಸೇವೆಯನ್ನು ಸ್ಥಗಿತಗೊಳಿಸಿದೆ.

ನೆನ್ನೆ ರಾತ್ರಿ ಪೋಲಿಸರು ಮತ್ತು ಕಂದಾಯ ಅಧಿಕಾರಿಗಳ ನಡುವೆ ಮಾರಾಮಾರಿಯಾಗಿದ್ದು. ಭಕ್ತರನ್ನು ಒಳಗೆ ಕಳುಹಿಸುವ ವಿಚಾರಕ್ಕೆ ಕೈಕೈ ಮಿಲಾಯಿಸಿಕೊಂಡಿದ್ದಾರೆ ಎಂಬ ಮಾಹಿತಿ ದೊರೆತಿದೆ. ಅದೇ ರೀತಿ ಇಂದು ಸಹ ಜಗಳವಾಗಿದ್ದು ಇದು ಭಕ್ತರ ಅಸಮಧಾನಕ್ಕೆ ಕಾರಣವಾಗಿತ್ತು.

VIP ಮತ್ತುVVIP ಪಾಸ್​ಗಳಿಂದಾಗಿ ಸಾಮಾನ್ಯ ಕ್ಯೂನಲ್ಲಿ ದೇವರ ದರ್ಶನ ಪಡೆಯುವ ಭಕ್ತರಿಗೆ ಸಾಕಷ್ಟು ತೊಂದರೆಯಾಗುತಿದೆ ಎಂದು ಭಕ್ತರು ದೇವಾಲಯದ ಆಡಳಿತ ಮಂಡಳಿಯ ಮೇಲೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ದೇವಾಲಯದಲ್ಲಿ ತಳ್ಳಾಟ, ನೂಕಾಟದಿಂದ ಭಕ್ತರು ಹೈರಾಣಾಗಿದ್ದು. ಜನರ ಆಕ್ರೋಶಕ್ಕೆ ಮಣಿದು ಹಾಸನಾಂಬೆ ದೇವಾಲಯ ಆಡಳಿತ ಅದಿಕಾರಿ ಮಾರುತಿ ಪಾಸ್​ಗಳನ್ನು ರದ್ದು ಮಾಡಲಾಗಿದೆ ಎಂದು ಆದೇಶ ಮಾಡಿದ್ದಾರೆ.

Exit mobile version