Site icon PowerTV

ದೆಹಲಿ ಪಟಾಕಿ ನಿಷೇಧಕ್ಕೆ ಹಿಂದೂ-ಮುಸ್ಲಿಂ ಧೋರಣೆಯಿಲ್ಲ- ಕೇಜ್ರಿವಾಲ್

ದೆಹಲಿ : ಪ್ರತಿ ಭಾರಿಯಂತೆ ಈ ಬಾರಿಯು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೀಪಾವಳಿ ಹಬ್ಬಕ್ಕೆ ಪಟಾಕಿ ನಿಷೇದದ ಮಾಡಿದ್ದು. ವಾಯುಮಾಲಿನ್ಯ ಹೆಚ್ಚಾದ ಹಿನ್ನಲೆ ಈ ಕ್ರಮ ಕೈಗೊಳ್ಳಾಲಾಗಿದೆ ಎಂದು ದೆಹಲಿ ಸರ್ಕಾರ ಸ್ಪಷ್ಟನೆ ನಡೆಸಿದೆ.

ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿ ನಿಷೇಧವನ್ನು ಸಮರ್ಥಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ, ಆಮ್ ಆದ್ಮ ಪಕ್ಷದ ಸಂಚಾಲಕ ಅರವಿಂದ ಕೇಜ್ರವಾಲ್, ಮಾಲಿನ್ಯದಿಂದ ಜನರನ್ನು ರಕ್ಷಿಸಲು ಇದು ಅವಶ್ಯಕವಾಗಿದ್ದು, ಹಿಂದೂ-ಮುಸ್ಲಿಂ ಧೋರಣೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಿಂದೂಗಳ ಹಬ್ಬವನ್ನು ಗುರಿಯಾಗಿಸಿ ಪಟಾಕಿ ಮೇಲೆ ನಿಷೇಧ ಹೇರಲಾಗಿದೆ ಎಂಬ ಬಿಜೆಪಿ ಮತ್ತು ಆರ್‌ಎಎಸ್ ಟೀಕೆಯನ್ನು ಕೇಜ್ರವಾಲ್ ತಳ್ಳಿ ಹಾಕಿದರು.

ಇದರಲ್ಲಿ ಹಿಂದೂ-ಮುಸ್ಲಿಂ ಧೋರಣೆಯೇ ಇಲ್ಲ. ಪ್ರತಿಯೊಬ್ಬರೂ ಉಸಿರಾಡುವುದು ಮತ್ತು ಪ್ರಾಣ ಮುಖ್ಯ’ ಎಂದು ಅವರು ಹೇಳಿದರು. ‘ಮಾಲಿನ್ಯದ ದೃಷ್ಟಿಯಿಂದ ಜನರು ಪಟಾಕಿ ಸಿಡಿಸುವುದನ್ನು ತಡೆಯಬೇಕು ಮತ್ತು ದೀಪಗಳನ್ನು ಬೆಳಗಿಸಬೇಕು ಎಂದು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಪ್ರತಿಪಾದಿಸಿವೆ’ ಎಂದು ಅವರು ಉಲ್ಲೇಖಿಸಿದರು.

Exit mobile version