Site icon PowerTV

ದರ್ಶನ್​ ಬೆಂಗಳೂರು ಬಿಟ್ಟು ಹೋಗುವಂತಿಲ್ಲಾ: ನ್ಯಾಯಾಲಯ ವಿಧಿಸಿದ ಷರತ್ತುಗಳೇನು ?

ಬೆಂಗಳೂರು : ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ದರ್ಶನ್​ಗೆ ಇಂದು (ಅ.30) ಹೈಕೋರ್ಟ್​ನ ಎಸ್​. ವಿಶ್ವಜಿತ್​ ಶೆಟ್ಟಿ ಅವರ ಏಕಸದಸ್ಯ ಪೀಠ ಜಾಮೀನು ನೀಡಿದ್ದು. ಜಾಮೀನು ನೀಡಲು ಹಲವಾರು ಷರತ್ತುಗಳನ್ನು ವಿಧಿಸಿದೆ. ಅವುಗಳು ಯಾವುವೆಂದು ಕೆಳಗೆ ವಿವರಿಸಿದೆ.

ದರ್ಶನ್​ ಪರ ವಕೀಲ ಸಿ.ವಿ ನಾಗೇಶ್​ ನೆನ್ನ ದರ್ಶನ್​ಗೆ ಇರುವ ಆರೋಗ್ಯ ಸಮಸ್ಯೆಯನ್ನು ನ್ಯಾಯಾಲಯಕ್ಕೆ  ಮನವರಿಕೆ ಮಾಡಿಕೊಟ್ಟಿದ್ದರು. ತೀವ್ರ ಬೆನ್ನು ನೋವಿನಿಂದ ನರಳುತ್ತಿರುವ ದರ್ಶನ್​ಗೆ ಶಸ್ತ್ರ ಚಿಕಿತ್ಸೆಯ ಅವಶ್ಯಕತೆಯಿದ್ದು. ಒಂದು ವೇಳೆ ಚಿಕಿತ್ಸೆ ನೀಡದೆ ಇದ್ದರೆ ಪಾರ್ಶ್ವವಾಯುವಾಗುತ್ತದೆ ಎಂದು ಮಾಹಿತಿ ನೀಡಿದ್ದರು. ವಾದವನ್ನು ಆಲಿಸಿದ ನ್ಯಾಯಾಲಯ ಇಂದು ಬೆಳಿಗ್ಗೆ ನಟ ದರ್ಶನ್​ಗೆ 42 ದಿನಗಳ ಷರತ್ತುಬದ್ದ ಜಾಮೀನು ನೀಡಿದೆ.

ಜಾಮೀನಿನ ಷರತ್ತುಗಳು:

ಈ ರೀತಿಯ ಷರತ್ತುಗಳ ಮೇಲೆ ದರ್ಶನ್​ಗೆ ಜಾಮೀನು ನೀಡಿದ್ದು. ಇಂದೇ ಇವುಗಳನ್ನು ಪೂರೈಸುವ ಮೂಲಕ ದಾಸ ದರ್ಶನ್​ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂಬ ಮಾಹಿತಿ ದೊರೆತಿದೆ

 

Exit mobile version