Site icon PowerTV

ಮೃತಪಟ್ಟ ಮಗನೊಂದಿಗೆ ನಾಲ್ಕು ದಿನ ಕಳೆದ ಅಂಧ ದಂಪತಿಗಳು

ಹೈದರಾಬಾದ್​ : ಮಗ ಮೃತಪಟ್ಟಿದ್ದಾನೆ ಎಂದು ತಿಳಿಯದ  ಅಂಧ ವೃದ್ದ ದಂಪತಿ ನಾಲ್ಕು ದಿನಗಳವರೆಗೆ ಮೃತದೇಹದೊಂದಿಗೆ ಮನೆಯಲ್ಲೆ ಇದ್ದ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ. ವೃದ್ದ ದಂಪತಿಗಳು ವಾಸಿಸುತ್ತಿದ್ದ ಮನೆಯಿಂದ ಕೆಟ್ಟವಾಸನೆ ಬರುತಿದ್ದ ಹಿನ್ನಲೆ ಅಕ್ಕಪಕ್ಕದ ಮನೆಯವರು ಪೋಲಿಸರಿಗೆ ಮಾಹಿತಿ ನೀಡಿದಾಗ ವಿಷಯ ಬೆಳಕಿಗೆ ಬಂದಿದೆ.

60 ವರ್ಷಕ್ಕಿಂತ ಮೇಲ್ಪಟ್ಟ ಅಂಧ ವೃದ್ದ ದಂಪತಿಗೆ ತಮ್ಮ ಮಗ ಸಾವನ್ನಪ್ಪಿದ್ದಾನೆ ಎಂದು ತಿಳಿದಿರಲಿಲ್ಲ. ಆಹಾರ ಮತ್ತು ನೀರಿಗಾಗಿ ಮಗನನ್ನು ಕರೆದರು ಯಾವುದೇ ಪ್ರತಿಕ್ರಿಯೆ ಬರದ ಹಿನ್ನಲೆ ದಂಪತಿಗಳು ತಾವಿದ್ದ ಜಾಗದಲ್ಲಿ ಸುಸ್ತಾಗಿ ಮಲಗಿದ್ದರು. ಇವರು ಕೂಗಿಕೊಂಡರು ಹೊರಗಿನವರಿಗೆ ಕೇಳಿಸದೆ ಇದ್ದಿದ್ದರಿಂದ ಹೊರಗಿನವರು ಇವರ ನೆರವಿಗೆ ಬಂದಿರಲಿಲ್ಲ ಎಂದು ನಾಗೋಲ್​ ಪೋಲಿಸ್​ ಠಾಣಾ ಎಸ್​ಎಚ್​​ಒ ಸೂರ್ಯ ನಾಯಕ್​ ತಿಳಿಸಿದ್ದಾರೆ. ಘಟನೆ ಕುರಿತು ಪ್ರಕರಣ ದಾಖಲಿಸಿರುವ ಪೋಲಿಸರು ತನಿಖೆ ನಡೆಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಪೋಲಿಸರು ವೃದ್ದ ದಂಪತಿಗಳಿಗೆ ಊಟ, ನೀರು ನೀಡಿ ಅವರಿಗೆ ಚಿಕಿತ್ಸೆ ನೀಡಿದ್ದು. ನಗರದ ಬೆರೊಂದು ಜಾಗದಲ್ಲಿ ವಾಸಿಸುತ್ತಿದ್ದ ಮತ್ತೊಬ್ಬ ಸಹೋದರನಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದ್ದು. ಮೃತ ವ್ಯಕ್ತಿಯ ದೇಹವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಪೋಸ್ಟ್​ ಮಾರ್ಟ್​ಮ್​ಗೆ ಕಳುಹಿಸಲಾಗಿದೆ.

Exit mobile version