Site icon PowerTV

ಟಾಕ್ಸಿಕ್​ ಸಿನಿಮಾ ಸೆಟ್​ ನಿರ್ಮಿಸಲು ಅರಣ್ಯ ಕಡಿದ ಚಿತ್ರತಂಡ: ಪರಿಶೀಲನೆ ನಡೆಸಿದ ಅರಣ್ಯ ಸಚಿವ ಖಂಡ್ರೆ

ಬೆಂಗಳೂರು : ರಾಕಿಂಗ್​ ಸ್ಟಾರ್​ ಅಭಿನಯದ ಬಹುನಿರೀಕ್ಷಿತ ಚಿತ್ರವಾದ ಟಾಕ್ಸಿಕ್​ ಸಿನಿಮಾ ಮೇಲೆ ಅರಣ್ಯ ಇಲಾಖೆಯ ಕಣ್ಣು ಬಿದ್ದಿದ್ದು. ನೂರರು ಮರಗಳನ್ನು ಕಡಿದು ಸೆಟ್​ ನಿರ್ಮಿಸಿರುವ ಚಿತ್ರ ತಂಡದ ಮೇಲೆ ಕೇಸ್​ ದಾಖಲಾದ ಹಿನ್ನಲೆ. ಇಂದು ಅರಣ್ಯ ಸಚಿವ ಈಶ್ವರ್​ ಖಂಡ್ರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

HMT ಸಂಸ್ಥೆಗೆ ಸೇರಿದ್ದ ಸುಮಾರು 20 ಎಕರೆ ಭೂಮಿಯಲ್ಲಿ ಸಿನಿಮಾ ತಂಡ ಅತಿಕ್ರಮಣ ಮಾಡಿ, ಯಾವುದೇ ಅನುಮತಿ ಪಡೆಯೆದೆ ನೂರಾರು ಮರಗಳನ್ನು ಕಡಿದು ಸಿನಿಮಾ ಸೆಟ್​ ನಿರ್ಮಾಣ ಮಾಡಿದ್ದಾರೆ ಎಂಬ ಆರೋಪ ಸಿನಿಮಾ ತಂಡದ ಮೇಲಿದ್ದು. ಇದರ ಕುರಿತು ವಕೀಲರೊಬ್ಬರು ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್​ನಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

 

ಏನಿದು ಪ್ರಕರಣ ?

ಯಶವಂತಪುರ ಹೋಬಳಿಯ ಪೀಣ್ಯ ಪ್ಲಾಂಟೇಷನ್‌ನಲ್ಲಿ ಅರಣ್ಯ ಇಲಾಖೆಗೆ ಸೇರಿರುವ 20 ಎಕರೆ ಭೂಮಿಯನ್ನು ಕೆವಿಎನ್‌ ಫಿಲ್ಮ್‌ ಪ್ರೊಡಕ್ಷನ್‌ ಕಂಪನಿ ಅನಧಿಕೃತವಾಗಿ ಒತ್ತುವರಿ ಮಾಡಿ ಟಾಕ್ಸಿಕ್‌ ಸಿನಿಮಾಗೆ ಸೆಟ್‌ ನಿರ್ಮಾಣ ಮಾಡುತ್ತಿದೆ ಎಂದು ಆರೋಪಿಸಿ ಬಾಲಾಜಿ ನಾಯ್ಡು ಎಂಬ ವಕೀಲರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್​ನಲ್ಲಿ ದಾಖಲಿಸಿದ್ದರು.

ಇದರ ಕುರಿತು ನ್ಯಾಯಾಲಯ ಜುಲೈ ತಿಂಗಳಲ್ಲೆ KVN ಸಿನಿಮಾ ತಂಡಕ್ಕೆ ನೋಟಿಸ್ ನೀಡಿ ಉತ್ತರ ನೀಡುವಂತೆ ಕೋರಿತ್ತು. ಇಂದು ಅರಣ್ಯ ಸಚಿವ ಈಶ್ವರ್​ ಖಂಡ್ರೆ ಈ ಪ್ರದೇಶಕ್ಕೆ ಭೇಟಿ ನೀಡಿದ್ದು ಪರೀಶೀಲನೆ ನಡೆಸಿದ್ದಾರೆ. ತಮ್ಮ ಎಕ್ಷ್ ಖಾತೆಯಲ್ಲಿ ಬರೆದುಕೊಂಡಿರು ಸಚಿವ ಅರಣ್ಯ ನಾಶಕ್ಕೆ ಯಾರು ಕಾರಣರಾಗಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಬರೆದುಕೊಂಡಿದ್ದಾರೆ.

Exit mobile version