Site icon PowerTV

ಕೇವಲ 6 ತಿಂಗಳಲ್ಲಿ 761ಕೆಜಿ ಚಿನ್ನ ಉತ್ಪಾದನೆ: ಹಟ್ಟಿ ಚಿನ್ನದ ಗಣಿಯ ಹೊಸ ಸಾಧನೆ

ರಾಯಚೂರು : ಕರ್ನಾಟಕವನ್ನು ಚಿನ್ನದ ನಾಡು ಎಂದು ಕರೆಯಲು ಕೋಲಾರದ ಕೆ.ಜಿ.ಎಫ್​ ಹೇಗೆ ಕಾರಣವೋ ಅದೇ ರೀತಿ ರಾಯಚೂರಿನ ಹಟ್ಟಿ ಚಿನ್ನದ ಗಣಿಯು ಸಹ ಚಿನ್ನದ ಉತ್ಪಾಧನೆಗೆ ಹೆಸರಾಗಿದೆ. ಈ ಭಾರಿ ಹಟ್ಟಿ ಚಿನ್ನದ ಗಣಿ ಹೊಸ ಸಾಧನೆ ಮಾಡಿದ್ದು ಸುಮಾರು 761 ಕೆಜಿ ಚಿನ್ನವನ್ನು ಉತ್ಪಾದನೆ ಮಾಡಿದೆ.

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿರುವ ಚಿನ್ನದ ಗಣಿ ಈ ಸಾಧನೆ ಮಾಡಿದ್ದು. 2024ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ 752 ಕೆ.ಜಿ ಚಿನ್ನ ಉತ್ಪಾದನೆ ಗುರಿ ಹೊಂದಲಾಗಿತ್ತು. ಆದರೆ ನಿಗದಿತ ಗುರಿಗಿಂತ ಈ ಬಾರಿ ಸುಮಾರು 9ಕೆಜಿಯಷ್ಟು ಹೆಚ್ಚು ಚಿನ್ನವನ್ನು ಉತ್ಪಾದನೆ ಮಾಡಿ ದಾಖಲೆ ನಿರ್ಮಿಸಿದೆ.

ಏಪ್ರಿಲ್ ತಿಂಗಳಲ್ಲಿ 9.43 ಕೆಜಿ, ಜೂನ್ ತಿಂಗಳಲ್ಲಿ 8.64 ಕೆಜಿ, ಜುಲೈ ತಿಂಗಳಲ್ಲಿ 16.51 ಕೆಜಿ..
ಸೆಪ್ಟೆಂಬರ್ ತಿಂಗಳಲ್ಲಿ 24.2 ಕೆಜಿ ಚಿನ್ನವನ್ನು ಗುರಿಗಿಂತ ಹೆಚ್ಚುವರಿಯಾಗಿ ಉತ್ಪಾದಿಸಲಾಗಿದೆ ಎಂದು ಮಾಇತಿ ದೊರೆತಿದ್ದು. 3.80 ಲಕ್ಷ ಮೆಟ್ರಿಕ್‌ ಟನ್ ಅದಿರು ಉತ್ಪಾದನೆ ಗುರಿ ಹೊಂದಿತ್ತು. ಆದರೆ ಕೇವಲ 3.13 ಲಕ್ಷ ಮೆಟ್ರಿ ಟನ್‌ ಅದಿರು ಉತ್ಪಾದನೆ ಮಾಡಲಾಗಿದೆ ಎಂದು ಮಹಿತಿ ದೊರೆತಿದೆ.

Exit mobile version