Site icon PowerTV

ರಾಜೀನಾಮೆ ಕೊಡು ಎಂದು ಪ್ರಭಾವಿಗಳ ಒತ್ತಡ: ಗ್ರಾಮ ಪಂಚಾಯತಿ ಅಧ್ಯಕ್ಷ ಆತ್ಮಹತ್ಯೆ?

ರಾಯಚೂರು : ಒತ್ತಾಯ ಪೂರ್ವಕವಾಗಿ ಪ್ರಭಾವಿಗಳು ರಾಜೀನಾಮೆ ಕೊಡಿಸಿದ್ದಕ್ಕೆ ಗ್ರಾಮ ಪಂಚಾಯತಿ  ಅಧ್ಯಕ್ಷನೊಬ್ಬ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ದ್ಯಾವಪ್ಪ ಪೂಜಾರಿ ಎಂಬ 60 ವರ್ಷದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದು.ಲಿಂಗಸಗೂರು ಪೋಲಿಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಐದಬಾವಿಯಲ್ಲಿ ಘಟನೆ ನಡೆದಿದ್ದು ದ್ಯಾವಪ್ಪ ಪೂಜಾರಿ (60) ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದಾನೆ. ಲಿಂಗಸಗೂರು ತಾಲ್ಲೂಕಿನ ದೇವರಭೂಪುರ ಗ್ರಾಮ ಪಂಚಾಯತಿ ಅಧ್ಯಕ್ಷನಾಗಿದ್ದ ದ್ಯಾವಪ್ಪ ಅಧ್ಯಕ್ಷನಾಗಲು ಸುಮಾರು 15 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದನು ಎಂದು ತಿಳಿದು ಬಂದಿದೆ.

ಎರಡುವರೆ ವರ್ಷದ ಅವಧಿಗೆ ಅಧ್ಯಕ್ಷ ಸ್ಥಾನದಲ್ಲಿರುವುದಾಗಿ ಒಪ್ಪದ ಮಾಡಿಕೊಂಡಿದ್ದ ದ್ಯಾವಪ್ಪನನ್ನು ಕೇವಲ 15 ತಿಂಗಳಿಗೆ ರಾಜೀನಾಮೆ ಕೊಡಿ ಎಂದು ಕೆಲ ಪ್ರಭಾವಿಗಳಿಂದ ಒತ್ತಡ ಬಂದ ಆರೋಪ ಹಿನ್ನಲೆ ದ್ಯಾವಪ್ಪ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮಾಹಿತಿ ದೊರೆತಿದೆ. ಸ್ಥಳಕ್ಕೆ ಲಿಂಗಸಗೂರು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಹೆಚ್ಚನ ಮಾಹಿತಿ ಕಲೆಹಾಕುತ್ತಿದ್ದಾರೆ.

Exit mobile version