Site icon PowerTV

500 ವರ್ಷಗಳ ನಂತರ ಬಾಲರಾಮ ಅಯೋಧ್ಯೆಯಲ್ಲಿ ದೀಪಾವಳಿ ಆಚರಿಸುತ್ತಿದ್ದಾರೆ : ಮೋದಿ

ದೆಹಲಿ :  ಈ ಬಾರಿಯ ದೀಪಾವಳಿ ವಿಶೇಷ ಏಕೆಂದರೆ 500 ವರ್ಷಗಳಲ್ಲಿ ಮೊದಲ ಬಾರಿಗೆ ಬಾಲರಾಮನು ಅಯೋಧ್ಯೆಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದಾರೆ ಎಂದು ಮಂಗಳವಾರ (ಅ.29) ತಿಳಿಸಿದರು. ಅಲ್ಲದೆ ಈ ಬಾರಿ ಅಯೋಧ್ಯೆಯಲ್ಲಿ 28 ಲಕ್ಷ ದೀಪಗಳನ್ನು ಬೆಲಗಿಸಲಾಗುತ್ತಿದೆ ಎಂದು ತಿಳಿಸಿದರು.

ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ದೇಶವಾಸಿಗಳಿಗೆ ಧನ್ತೇರಸ್ ಶುಭಾಶಯಗಳನ್ನು ಕೋರಿದ  ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಎರಡು ದಿನಗಳ ನಂತರ ನಾವು ದೀಪಾವಳಿಯನ್ನು ಆಚರಿಸುತ್ತಿದ್ದೇವೆ. ಈ ವರ್ಷದ ದೀಪಾವಳಿ ಬಹಳ ವಿಶೇಷವಾಗಿದೆ. 500 ವರ್ಷಗಳ ನಂತರ ಬಾಲ ರಾಮನು ಅಯೋಧ್ಯೆಯ ತನ್ನ ಭವ್ಯವಾದ ದೇವಾಲಯದಲ್ಲಿ ಕುಳಿತಿದ್ದಾನೆ. ಅವನು ಕುಳಿತು ಕೊಂಡನಂತರ ಭವ್ಯವಾದ ದೇವಾಲಯದಲ್ಲಿ ಆತನೊಂದಿಗೆ ಆಚರಿಸುವ ಮೊದಲ ದೀಪಾವಳಿ ಇದು ಎಂದು ನಾನು ನಿಮಗೆ ಹೇಳುತ್ತೇನೆ ಇಂತಹ ವಿಶೇಷವಾದ ಮತ್ತು ಭವ್ಯವಾದ ದೀಪಾವಳಿಯನ್ನು ವೀಕ್ಷಿಸಲು ನಾವೆಲ್ಲರೂ ಅದೃಷ್ಟವಂತರು ಎಂದು ಹೇಳಿದರು.

Exit mobile version