Site icon PowerTV

ಖಡ್ಗಮಾಲಾ ಸ್ತೋತ್ರದ ಮೂಲಕ ಹಾಸನಾಂಬೆಗೆ ಅರ್ಚನೆ ಮಾಡಿಸಿದ ಸಿಎಂ ಸಿದ್ದರಾಮಯ್ಯ

ಹಾಸನ : ಹಾಸನ ಅಧಿದೇವತೆಯಾದ ಹಾಸನಾಂಬೆಯ ದರ್ಶನ ಮಾಡಿದ ಸಿಎಂ.ಸಿದ್ದರಾಮಯ್ಯ. ತಾಯಿ ಹಾಸನಾಂಬೆಗೆ ಖಡ್ಗಮಾಲಾ ಸ್ತೋತ್ರದ ಅರ್ಚನೆ ಮಾಡಿಸುವ ಮೂಲಕ ಯಾವುದೇ ಅತೀಂದ್ರಿಯ ಶಕ್ತಿಗಳಿಂದ ಯಾವುದೆ ಸಮಸ್ಯೆ ಬರದ ಹಾಗೆ ದೇವರಲ್ಲಿ ಪ್ರಾಥಿಸಿದರು.

ನಿನ್ನೆ ಹಾಸನಾಂಬೆ ದೇವಿ ದರ್ಶನ ಪಡೆಯುವಾಗ ಅಷ್ಟೋತ್ತರದಿಂದ ಪೂಜೆ ಮಾಡುವುದು ವಾಡಿಕೆಯಾಗಿದ್ದು.
ಈ ಬಾರಿ ಖಡ್ಗಮಾಲಾ ಸ್ತೋತ್ರದ ಮೂಲಕ ದೇವಿಯನ್ನು ಅರ್ಚಿಸಿದ್ದು ವಿಶೇಷವಾಗಿತ್ತು. ಖಡ್ಗಮಾಲಾ ಸ್ತೋತ್ರ ಶಕ್ತಿ ದೇವಿಯ ಅತ್ಯಂತ ಪವಿತ್ರ ಮತ್ತು ಶಕ್ತಿಯುತ ಮಂತ್ರವಾಗಿದ್ದು. ಈ ಮಂತ್ರವನ್ನು ಪಠಿಸುವುದರಿಂದ ಅತೀಂದ್ರಿಯ ಆಯುಧಗಳ ರಕ್ಷಣಾತ್ಮಕ ಮಾಲೆ ಸಿಗುತ್ತದೆ ಎಂದು ನಂಬಲಾಗಿದೆ.

ಮುಡಾ ಹಗರಣ ಸೇರಿದಂತೆ ಅನೇಕ ವಿಚಾರಗಳಲ್ಲಿ ತೊಂದರೆ ಎದುರಿಸುತ್ತಿರುವ ಮುಖ್ಯಮಂತ್ರಿಗಳು. ಸಮಸ್ಯೆಯಿಂದ ಪಾರಾಗಲು ಖಡ್ಗಮಾಲಾ ಸ್ತೋತ್ರದ ಮೂಲಕ ಅರ್ಚನೆ ಮಾಡಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.

Exit mobile version