Site icon PowerTV

ಉಗ್ರರ ವಿರುದ್ಧದ ಕಾರ್ಯಾಚರಣೆ ಸೇನೆಯ ಹೆಮ್ಮೆಯ ಶ್ವಾನ ಫ್ಯಾಂಟಮ್​ ವೀರ ಮರಣ

ಜಮ್ಮು&ಕಾಶ್ಮೀರ್​ :  ಯಾವುದೇ ಸ್ವಾರ್ಥವಿಲ್ಲದೆ ದೇಶ ಸೇವೆಯಲ್ಲಿ ನಿರತವಾಗಿದ್ದ ಭಾರತೀಯ ಸೇನೆಯ ಎಲ್ಲರ ಅಚ್ಚುಮೆಚ್ಚಿನ ಶ್ವಾನ ಫ್ಯಾಂಟಮ್​ ಇಂದು (ಅ.29) ಉಗ್ರರ ಕಾರ್ಯಚರಣೆಯಲ್ಲಿ ವೀರಮರಣವನ್ನು ಹೊಂದಿದೆ.

ಸೋಮವಾರ ಬೆಳಿಗ್ಗೆ ಜಮ್ಮು ಕಾಶ್ಮೀರದ ಅನ್ನೂರ್‌ನ ಸುಂದರ್‌ಬನಿ ಸೆಕ್ಟರ್‌ನಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಹೆಮ್ಮೆಯ ಶ್ವಾನ ‘ಫ್ಯಾಂಟಮ್ ವೀರ ಮರಣವನ್ನಪ್ಪಿದೆ. ಕಳೆದ ಕೆಲವು ದಿನಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ ತೀವ್ರಗೊಂಡಿದ್ದು ಇದರ ಹಿನ್ನೆಲೆಯಲ್ಲಿ ಸೇನೆ ಉಗ್ರರ ವಿರುದ್ಧ ಕಾರ್ಯಾಚರಣೆಗೆ ಸೋಮವಾರ ಬೆಳಿಗ್ಗೆ ಮುಂದಾಗಿದೆ ಅದರಂತೆ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಉಗ್ರರು ಸೇನಾ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಈ ವೇಳೆ ಸೇನಾ ಪಡೆಯ ಶ್ವಾನ ‘ಫ್ಯಾಂಟಮ್ ಗೆ ಗಂಭೀರ ಗಾಯವಾಗಿತ್ತು ಕೂಡಲೇ ಶ್ವಾನಕ್ಕೆ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Exit mobile version