Site icon PowerTV

ಮಳೆ ಇಲ್ಲ ಆದರೂ ರಾಜಧಾನಿಯ ಜನರಿಗೆ ತಪ್ಪದ ನೆರೆ

ಬೆಂಗಳೂರು : ಕಳೆದ ವಾರವೆಲ್ಲಾ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ರಾಜಧಾನಿಯ ಅನೇಕ ಭಾಗಗಳು ನೀರು ತುಂಬಿಕೊಂಡು ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈಗ ಬೆಂಗಳೂರಿನಲ್ಲಿ ಮಳೆ ನಿಂತರು ರಾಜಧಾನಿಯ ಆಂದ್ರಹಳ್ಳಿ ಜನರಿಗೆ ನೀರಿನ ಕಾಟ ತಪ್ಪಿಲ್ಲ. ಅದೇನೆಂದು ಕೆಳೆಗಿನ ವರದಿಯನ್ನು ನೋಡಿ.

ಬೆಂಗಳೂರಿನ ಅಂದ್ರಳ್ಳಿ ಹತ್ತಿರ  ಡಿ ಗ್ರೂಪ್ ಫಸ್ಟ್ ಬ್ಲಾಕ್ ಅಲ್ಲಿ ರಸ್ತೆಗಳೆಲ್ಲ ಕೆರೆಯಂತಾಗಿದ್ದು. 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಯೋಜನೆಯ ಕಾವೇರಿ ನೀರಿನ‌ ಬೃಹತ್ ಪೈಪ್ ಡ್ಯಾಮೇಜ್‌ ಆಗಿ ನೀರೆಲ್ಲ ರಸ್ತೆಯ ಮೇಲೆ  ಹರಿಯುತ್ತಿದೆ. ಇದರಿಂದಾಗಿ ಭಾರೀ ಪ್ರಮಾಣದ ನೀರು ಪೋಲಾಗಿದ್ದು. ಬರೋಬ್ಬರಿ ಎರಡು ಗಂಟೆಗಳ ಕಾಲ ನೀರು ಹರಿದ ಮೇಲೆ ಬೆಂಗಳೂರು ಜಲಮಂಡಳಿ ನೀರನ್ನು ನಿಲ್ಲಿಸಿದೆ.

ಕಾವೇರಿ ಪೈಪ್ ಒಡೆದು ಅಪಾರ ಪ್ರಮಾಣದ ನೀರು ರಸ್ತೆ ಮೇಲೆ ಹರಿದಿದ್ದು. ಮನೆಗಳಿಗೆ ನೀರು ನುಗ್ಗಿ ಅನಾಹುತ ಸೃಷ್ಟಿಯಾಗಿದೆ. ಭಾರೀ ಪ್ರಮಾಣದ ನೀರಿ ಪೋಲಾಗಿದ್ದು ನಂತರ ಬೆಂಗಳೂರು ಜಲಮಂಡಳಿ ನೀರು ನಿಲ್ಲಿಸಿದ್ದು. ದುರಸ್ತಿ ಕಾರ್ಯ ನಡೆಸಲಾಗುತ್ತಿದೆ ಎಂಬ ಮಾಹಿತಿ ದೊರೆತಿದೆ.

Exit mobile version