Site icon PowerTV

ಮೊದಲ ಸಮಾವೇಶದಲ್ಲೆ ಎದುರಾಳಿಗಳಿಗೆ ನಡುಕ ಹುಟ್ಟಿಸಿದ ದಳಪತಿ ವಿಜಯ್​

ತಮಿಳುನಾಡು : ತಮಿಳಗ ವೆಟ್ರಿ ಕಳಗಂ​ ಪಕ್ಷದ ಮೂಲಕ ತಮಿಳುನಾಡು ರಾಜಕೀಯ ಅಖಾಡಕ್ಕೆ ಇಳಿದಿರುವ ನಟ ವಿಜಯ್ ದಳಪತಿ, ತಮ್ಮ ಮೊದಲ ರಾಜಕೀಯ ಸಭೆಯಲ್ಲಿಯೇ ರಾಜಕೀಯ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದ್ದಾರೆ. ವಿಲ್ಲುಪುರಂ ಜಿಲ್ಲೆಯ ವಿಕ್ರವಾಂಡಿಯಲ್ಲಿ ಆಯೋಜಿಸಲಾಗಿದ್ದ ಮೊದಲ ಸಭೆಯಲ್ಲಿ ಲಕ್ಷಾಂತರ ಮಂದಿ ಸೇರಿದ್ದರು. ಈ ವೇಳೆ ಅವರು ಆಡಳಿತಾರೂಢ ಡಿಎಂಕೆ ಹಾಗೂ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜಕೀಯ ಪ್ರವೇಶಕ್ಕಾಗಿ ಹೊಸ ಪಕ್ಷ ಘೋಷಿಸಿರುವ ತಮಿಳುನಾಡು ಚಿತ್ರರಂಗದ ಜನಪ್ರಿಯ ನಟ ದಳಪತಿ ವಿಜಯ್‌ ಅವರಿಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಅವರು ಭಾನುವಾರ ತಮ್ಮ ‘ತಮಿಳಗ ವೆಟ್ರಿ ಕಳಗಂ ಪಕ್ಷದ ಮೊದಲ ರಾಜ್ಯಮಟ್ಟದ ಸಮಾವೇಶ ಭಾನುವಾರ ನಡೆಸಿದರು. ವಿಲ್ಲುಪುರಂ ಜಿಲ್ಲೆಯ ವಿಕ್ರವಾಂಡಿಯಲ್ಲಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಲಕ್ಷಕ್ಕೂ ಹೆಚ್ಚು ಮಂದಿ ವಿಜಯ್‌ ಬೆಂಬಲಿಗರು, ಟಿವಿಕೆ ಕಾರ್ಯಕರ್ತರು ಭಾಗಿಯಾಗಿದ್ದು ವಿಶೇಷ.

Exit mobile version