Site icon PowerTV

ಪ್ರಧಾನಿ ಮನೆಗೆ ಬಂದಿದ್ದನ್ನು ಸಮರ್ತಿಸಿಕೊಂಡ ಸಿಜೆಐ ಚಂದ್ರಚೂಡ್​

ದೆಹಲಿ : ಗಣೇಶನ ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್​ ಅವರ ಮನೆಗೆ ಬಂದಿದ್ದನ್ನು ಸಮರ್ತಿಸಿಕೊಂಡಿದ್ದಾರೆ.

ಪ್ರಧಾನಿ, ಸಿಎಂಗಳು ಸಿಜೆಐ ಮನೆಗೆ ಸೋಷಿಯಲ್ ಕಾರ್ಯಕ್ರಮಗಳಿಗೆ ಭೇಟಿ ನೀಡಬೇಕು, ಮಕ್ಕಳ ಮದುವೆ, ಹಬ್ಬದ ಸಂದರ್ಭಗಳಲ್ಲಿ ಭೇಟಿ ನೀಡುವುದು ತಪ್ಪಲ್ಲ ಎಂದು ಹೇಳಿರುವ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್​ ನಮ್ಮ ಮನೆಗೆ ಪ್ರಧಾನಿ ಭೇಟಿ ನೀಡಿದ್ದ ಬಗ್ಗೆ ವಿವಾದ ಅನಗತ್ಯ ಮತ್ತು ಅತಾರ್ಕಿಕ ಎಂದು ಹೇಳಿದ್ದಾರೆ.

ಮುಂದುವರಿದು ಮಾತನಾಡಿದ ಡಿ.ವೈ.ಚಂದ್ರಚೂಡ್​  ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನಮಗೆ ನಮ್ಮ ಜವಾಬ್ದಾರಿಗಳ ಬಗ್ಗೆ ಅರಿವು ಇದೆ. ಅದೇ ರೀತಿ ರಾಜಕೀಯ ನಾಯಕರಿಗೂ ಅವರ ಕರ್ತವ್ಯಗಳ ಬಗ್ಗೆ ಅರಿವು ಇರುತ್ತದೆ. ಸಿಜೆಐ, ಸುಪ್ರೀಂಕೋರ್ಟ್ ಜಡ್ಜ್, ಹೈಕೋರ್ಟ್ ಜಡ್ಜ್ ಗಳು ನ್ಯಾಯಾಂಗದ ವಿಷಯಗಳನ್ನು ರಾಜಕಾರಣಿಗಳ ಜೊತೆಗೆ ಚರ್ಚೆ ಮಾಡಿಲ್ಲ.ಆ ರೀತಿ ನ್ಯಾಯಾಂಗ ವಿಷಯ ಚರ್ಚಿಸಿದ ಉದಾಹರಣೆಯೇ ಇಲ್ಲ
ಬರೀ ಶುಭಾಶಯಗಳನ್ನು ಮಾತ್ರ ಪರಸ್ಪರ ವಿನಿಮಯ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.

Exit mobile version