Site icon PowerTV

ಕಿಡಿಗೇಡಿಗಳ ಅಟ್ಟಹಾಸ: ಕಾರನ್ನು ದ್ವಂಸಗೊಳಿಸಿದ ಕಿರಾತಕರು

ಬೆಂಗಳೂರು : ಮನೆ ಮುಂದೆ ಕುಳಿತು ಕುಡಿಯುತ್ತಿದ್ದವರಿಗೆ ಎದ್ದು ಹೋಗಿ ಎಂದು ಹೇಳಿದ್ದಕ್ಕೆ. ಮನೆಯ ಮುಂದೆ ನಿಂತಿದ್ದ ಕಾರನ್ನು ಜಖಂಗೊಳಿಸದ ಘಟನೆ ಬೆಂಗಳೂರನ ಬ್ಯಾಡರಹಳ್ಳಿಯ ತುಂಗಾನಗರದಲ್ಲಿ ನಡೆದಿದೆ. ಘಟನೆ ಸಂಬಂಧ ಬ್ಯಾಡರಹಳ್ಳಿ ಪೋಲಿಸ್​ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲಿಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ನಿನ್ನೆ(ಅ.27) ರಾತ್ರಿ ಶಿವಗಂಗೆಗೌಡರ ಮನೆ ಸಮೀಪ ಎಣ್ಣೆ ಹಾಕುತ್ತಾ ಕುಳಿತಿದ್ದವರನ್ನು ಮನೆ ಮಾಲೀಕ ಪ್ರಶ್ನೆ ಮಾಡಿ ಎದ್ದು ಹೋಗುವಂತೆ ಗದರಿದ್ದರು. ಇದರಿಂದ ಆಕ್ರೋಶಗೊಂಡ ಕಿಡಿಗೇಡಿಗಳು ಆ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ ಮತ್ತು ಮನೆ ಮುಂದೆ ನಿಂತಿದ್ದ ಕಾರಿನ ಗಾಜುಗಳನ್ನು ಸಿಮೆಂಟ್​ ಇಟ್ಟಿಗೆಗಳಿಂದ  ಹೊಡದು ಜಖಂಗೊಳಿಸಿ ಅಟ್ಟಹಾಸ ಮೆರೆದಿದ್ದಾರೆ.

ಕಿಡಿಗೇಡಿಗಳ ಕೃತ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು. ಹಲ್ಲೆಗೆ ಹೊಳಗಾದ ಶಿವಗಂಗೇಗೌಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಬ್ಯಾಡರಹಳ್ಳಿ ಫೋಲಿಸ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು. ಪೋಲಿಸರು ಆರೋಪಿಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

Exit mobile version