Site icon PowerTV

ದರ್ಶನ್​ ​ಬೇಗ ಹೊರಗೆ ಬರಲಿ ಎಂದು ಹಾಸನಾಂಬೆಯ ಬಳಿ ಪ್ರಾರ್ಥಿಸಿದ ತರುಣ್ ಸುಧೀರ್​​

ಹಾಸನ :ಹಾಸನಾಂಬೆ ದರ್ಶನ ಪಡೆದು ನಿರ್ದೇಶಕ ತರುಣ್ ಸುಧೀರ್  ಮಾಧ್ಯಮದವರೊಂದಿಗೆ ಮಾತನಾಡಿದ್ದು. ಹಾಸನಾಂಬೆಯ ದರ್ಶನ ಪಡೆದು ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬೇಡಿಕೊಂಡಿದ್ದೇನೆ.
ಮದುವೆಯಾಗಿ ಮೊದಲ ಬಾರಿ ಬಂದಿರೋದು ವಿಶೇಷವಾಗಿದೆ ಎಂದು ಖುಷಿ ಹಂಚಿಕೊಂಡರು.

ದೇವರ ದರ್ಶನ ಮುಗಿಸಿ ಹೊರಬಂದ ನಿದೇರ್ಶಕ ತರುಣ್ ಸುಧೀರ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್​ ಅವರ ಬಗ್ಗೆ ಮಾತನಾಡಿದರು. ನಾವು ಈ ಬಾರಿ ಬಂದು ತಾಯಿಯ ಆರ್ಶೀವಾದ ಪಡೆದಿದ್ದೇವೆ.
ಆದರೆ ದರ್ಶನ್ ಸರ್ ಈ ಬಾರಿ ಬಂದಿಲ್ಲ ಒಂದು ವೇಳೆ ಅವರು ಹೊರಗೆ ಇದ್ದಿದ್ರೆ ಅವರೂ ಕೂಡ ಹಾಸನಾಂಬೆಯ ದರ್ಶನಕ್ಕೆ ಬರುತ್ತಿದ್ರು. ಅವರು ಬೇಗ ಹೊರಬರಲಿ‌ ಎಂದು ಕೇಳಿಕೊಂಡಿದ್ದೇನೆ ಎಂದು ತರುಣ್ ಹೇಳಿದರು.

ಪ್ರತಿ ವರ್ಷ ನಾನು ಹಾಸನಾಂಬೆಗೆ ಬರುತ್ತಿದ್ದೆ. ಆದರೆ ಕಳೆದ ವರ್ಷ ಶೂಟಿಂಗ್ ಇದ್ದಿದ್ದರಿಂದ ಬರಲಾಗಲಿಲ್ಲ ಆದರೆ ಕಳೆದ ವರ್ಷ ಸೋನಾಲ್ ಒಬ್ಬರೆ ಬಂದಿದ್ದರು. ಹಾಸನಾಂಬೆಯನ್ನ ನೋಡಿದ ಕೂಡಲೇ ಒಂದು ಪಾಸಿಟಿವ ಎನರ್ಜಿ ಬರುತ್ತೆ ಆ ಸ್ಥಾನದಲ್ಲಿ ತುಂಬಾ ವೈಬ್ರೇಶನ್ ಇರುತ್ತೆ. ಅಲ್ಲಿ‌‌ ನಿಂತಾಗ ಮನಸ್ಸಿನಲ್ಲಿ ಇರೋದೆಲ್ಲವನ್ನೂ ಹೇಳ್ಕೋಬೇಕು ಎನಿಸುತ್ತೆ ಅಷ್ಟು ಶಕ್ತಿ‌ ಇದೆ ಎಂದ ತರುಣ್ ಹೇಳಿದರು.

Exit mobile version