Site icon PowerTV

ಆಸ್ತಿಗಾಗಿ ಗಂಡನನ್ನೆ ಕೊಲೆ ಮಾಡಿ ಸುಟ್ಟು ಹಾಕಿದ ಅರ್ಧಾಂಗಿ? ರೋಚಕ ಕ್ರೈಂ ಸ್ಟೋರಿ

ಕೊಡಗು : ಅಕ್ಟೋಬರ್ 8ರಂದು ಜಿಲ್ಲೆಯ ಸುಂಟಿಕೊಪ್ಪದಲ್ಲಿ ಸುಟ್ಟ ಶವ ಪತ್ತೆಯಾದ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ತೆಲಂಗಾಣದಲ್ಲಿ ಕೊಲೆ ಮಾಡಿ ನಂತರ ಕೊಡಗಿಗೆ ಶವ ತಂದು ಸುಟ್ಟು ಹಾಕಿದ್ದಾರೆ ಎಂದು ಪೋಲಿಸರು ಮಾಹಿತಿ ನೀಡಿದ್ದು. ಪ್ರಕರಣ ಸಂಭಂದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ‌ ನಿಹಾರಿಕ (29), ಪಶುವೈದ್ಯ ನಿಖಿಲ್, ಹರಿಯಾಣದ ಅಂಕುರ್ ಎಂಬುವವರನ್ನು ಬಂಧಿಸಿದ್ದಾರೆ

ಕೊಲೆ ಮಾಡಿದ ಉದ್ದೇಶ ? 

10ನೇ ತರಗತಿಯಲ್ಲಿಯೆ ಮದುವೆಯಾಗಿದ್ದ ನಿಹಾರಿಕ ಎರಡು ಮಕ್ಕಳಾದ ನಂತರ ತನ್ನ ಪತಿಗೆ ವಿಚ್ಚೇದನ ನೀಡಿದ್ದಳು. ಇದಾದ ಬಳಿಕ ಆಕೆಗೆ ಹರಿಯಾಣ ಮೂಲದ ಅಂಕುರ ಎಂಬುವವನ ಪರಿಚಯವಾಗಿ ಆತನ ಸ್ನೇಹದಿಂದ ಆಕೆಗೆ ರಮೇಶ್​ ಎಂಬ ರಿಯಲ್​ ಎಸ್ಟೆಟ್​ ಉದ್ಯಮಿಯ ಪರಿಚಯವಾಗಿ ಆತನ ಮೇಲೆ ಪ್ರೀತಿಯಾಗಿ ಆತನನ್ನು ಮದುವೆಯಾಗಿದ್ದಳು.

ಮದುವೆಯಾದ ನಂತರ ಆಕೆಗೆ ರಮೇಶ್​ ಜೊತೆ ಬಾಳುವುದು ಕಷ್ಟವಾಗಿ ನಿಖಿಲ್​ ಎಂಬಾತನೊಂದಿಗೆ ಲಿವಿಂಗ್​ ರಿಲೇಷನ್​ ಶಿಪ್​ನಲ್ಲಿದ್ದಳು. ಆದರೆ ಆಕೆಗೆ ರಮೇಶನ ಆಸ್ತಿಯ ಮೇಲೆ ಕಣ್ಣು ಬಿದ್ದು ಹೇಗಾದರು ಮಾಡಿ ಆಸ್ತಿಯನ್ನು ಕಬಳಿಸಿಬೇಕು ಎಂದು ಸಂಚು ಹೂಡಿದ್ದ ನಿಹಾರಿಕ ರಮೇಶನಿಗೆ ಕಿರುಕುಳ ನೀಡಲು ಶುರುಮಾಡಿದ್ದಳು. ಆದರೆ ಆಕೆಗೆ ಆಸ್ತಿಕೊಡಲು ರಮೇಶ್ ಒಪ್ಪದೆ ಇದ್ದಾಗ ಆತನ ಕೊಲೆ ಮಾಡಲು ಅಂಕುರ್​ ಜೊತೆ ಸೇರಿ ಸಂಚು ರೂಪಿಸಿದ್ದಳು.

ತನ್ನ ಸಂಚಿನಂತೆಯೆ ರಮೇಶ್​ನನ್ನು ಹೈದರಾಬಾದ್ ಸಮೀಪ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದ ಆರೋಪಿಗಳು. ಆತನ ಅಪಾರ್ಟ್​ಮೆಂಟ್​ಗೆ ಹೋಗಿ ಹಣ, ಆಸ್ತಿ ಪತ್ರಗಳನ್ನು ದೋಚಿದ್ದಳು. ಇದಾದ ನಂತರ ಕಾರಿನಲ್ಲಿ ಬೆಂಗಳೂರಿಗೆ ಬಂದು ಪೆಟ್ರೋಲ್​ ಖರೀದಿಸಿದ್ದರು. ಬೆಂಗಳೂರಿನ ಮೂಲಕ ಕಾರಿನಲ್ಲಿ ಕೊಡಗಿಗೆ ಬಂದ ಆರೋಪಿಗಳು ಶುಂಟಿಕೊಪ್ಪದ ಬಳಿ ಆರೋಪಿಯ ಶವವನ್ನು ಸುಟ್ಟಿಹಾಕಿದ್ದರು.

ಇದಾದ ನಂತರ ಅ.08 ರಂದು ಶುಂಠಿಕೊಪ್ಪದ ಬಳಿ ಅಪರಿಚಿತ ಸುಟ್ಟಶವ ಪತ್ತೆಯಾದ ಹಿನ್ನಲೆ ಪ್ರಕರಣ ದಾಖಲಿಸಿಕೊಂಡ ಪೋಲಿಸರು ಸಿಸಿಟಿವಿಯನ್ನು ಪರಿಶೀಲಿಸಿ ಆರೋಪಿಗಳು ಬಂದ ರೆಡ್​ ಕಲರ್​ ಬೆಂಜ್​ ಕಾರನ್ನು ಗುರುತಿದ್ದರು. ಇದಾದ ನಂತರ ವಿವಿದೆಡೆ  ತಲೆಮರಿಸಿಕೊಂಡು ಓಡಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೋಲಿಸರು ಸಫಲರಾಗಿದ್ದಾರೆ. ಕೊಡಗು ಪೋಲಿಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು. ಪೋಲಿಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

 

Exit mobile version