Site icon PowerTV

ಅಣ್ಣ ತಮ್ಮಂದಿರ ಜಗಳದಲ್ಲಿ ಲಕ್ಷಾಂತರ ಮೌಲ್ಯದ ತೊಗರಿ ಬೆಳೆ ನಾಶ

ರಾಯಚೂರು : ಹುಟ್ಟತ್ತ ಅಣ್ಣ ತಮ್ಮಂದಿರು, ಬೆಳಿತ ದಾಯಾದಿಗಳು ಎಂಬ ಮಾತು ಅಕ್ಷರಶಹ ಸತ್ಯ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಆಸ್ತಿ ವಿವಾದಕ್ಕೆ ಸ್ವಂತ ತಮ್ಮ ಬೆಳೆದಿದ್ದ 8 ಎಕರೆ ತೊಗರಿ ಬೆಳೆಯನ್ನು ಅಣ್ಣ ಟ್ರ್ಯಾಕ್ಟರ್​ ಮೂಲಕ ನಾಶಪಡಿಸಿದ್ದಾನೆ.

ರಾಯಚೂರು ತಾಲೂಕಿನ ಗುಂಜಳ್ಳಿ ಗ್ರಾಮದಲ್ಲಿ ಘಟನೆಯಾಗಿದ್ದು. ಶ್ರೀರಾಮುಲು ಎಂಬ ರೈತನು ಬೆಳೆದಿದ್ದ ಬೆಳೆ ನಾಶವಾಗಿದೆ. ಅಣ್ಣ ತಮ್ಮಂದಿರ ನಡುವೆ ಭೂಮಿ ಹಂಚಿಕೆ ಮಾಡುವ ಬಗ್ಗೆ ವಿವಾದ ಉಂಟಾಗಿತ್ತು. ಈ ವಿವಾದವನ್ನು ಕೆಲದಿನಗಳ ಹಿಂದೆ ರಾಜಿ ಸಂದಾನ ಮಾಡಿ ಬಗೆಹರಿಸಲಾಗಿತ್ತು. ಆದರೂ ಇವರ ನಡುವೆ ಇದ್ದ ದ್ವೇಷದಿಂದ ಈಗ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶವಾಗಿದೆ.

ಸುಮಾರು 2 ವರೆ ಲಕ್ಷ ರೂ ಖರ್ಚು ಮಾಡಿ ರೈತ ಶ್ರೀರಾಮುಲು 8 ಎಕರೆ ಪ್ರದೇಶದಲ್ಲಿ ತೊಗರಿ ಬೆಲೆದಿದ್ದನು. ತೊಗರಿ ಬೆಳೆಯು ಕೂಡ ಚನ್ನಾಗಿ ಬಂದು ಸುಮಾರು 6 ರಿಂದ 7 ಲಕ್ಷ ರೂಪಾಯಿ ಲಾಭವನ್ನು ನಿರೀಕ್ಷಿಸಲಾಗಿತ್ತು. ಆದರೆ ಸೀತಾರಾಮರಡ್ಡಿ, ವೆಂಕಟರೆಡ್ಡಿ, ಗೋವರ್ಧನ ರೆಡ್ಡಿ ಎಂಬುದರಿಂದ ಬೆಳೆ ನಾಶ ಮಾಡಿದ್ದಾರೆ ಎಂದು ರೈತ ಶ್ರೀರಾಮುಲು ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು. ಬೆಳೆನಾಶಕ್ಕೆ ಪರಿಹಾರ ಒದಗಿಸಿಕೊಂಡುವಂತೆ ರೈತನ ಮನವಿ ಮಾಡಿದ್ದಾನೆ.

 

Exit mobile version